ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಮಾರುಕಟ್ಟೆ ಕಾಮಗಾರಿ ಶೀಘ್ರ ಪೂರ್ಣ: ಸಚಿವ ಬೈರತಿ ಬಸವರಾಜ್

ಸುರತ್ಕಲ್: ಇಲ್ಲಿನ ಮಾರುಕಟ್ಟೆಗೆ ಸದ್ಯದ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚುವರಿ 14 ಕೋಟಿ ರೂ.ಅನುದಾನ ಒದಗಿಸಲು ಬೇಕಾದ ಅನುಮೋದನೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ನೀಡಲಾಗುವುದು. ಮಾತ್ರವಲ್ಲ ಭಾಗಶಃ ಪೂರ್ಣಗೊಂಡ ಮಾರ್ಕೆಟ್ ಕಟ್ಟಡವನ್ನು 6 ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಭರವಸೆ ನೀಡಿದರು. ಸುರತ್ಕಲ್‍ನಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ ಮೇರೆಗೆ ಅಗಮಿಸಿ ಬೃಹತ್ ಮಾರುಕಟ್ಟೆಯ ಕಾಮಗಾರಿಯನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಪಾಲಿಕೆಯಿಂದಲೇ ಎಸ್‍ಎಫ್‍ಸಿ ಅನುದಾನ ಬಳಸಿ ಪುರ್ಣಗೊಳಿಸಲಾಗುವುದು ಎಂದರು.

ನಗರದ ಹೊರವಲಯದ ಕೊಟ್ಟಾರ ಚೌಕಿ ಬಳಿ ಸರಕಾರಿ ಜಾಗವಿದ್ದು ಅದರಲ್ಲಿ ಟ್ರಾನ್ಸ್ ಪೋರ್ಟ್ ಹಬ್ ನಿರ್ಮಾಣ ಮಾಡಲಾಗುವುದು. ಇದಲ್ಲದೆ ಒಟ್ಟು ನಾಲ್ಕು ಜಾಗದಲ್ಲಿ ಟ್ರಾನ್ಸ್ ಪೋರ್ಟ್ ಹಬ್ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದರು.

ಶಾಸಕರಾದ ಡಾ.ಭರತ್ ಶೆಟ್ಟಿ ವೈ, ಮೇಯರ್ ಪ್ರೇಮಾನಂದ ಶೆಟ್ಟಿ ,ಮನಪಾ ಸದಸ್ಯರಾದ ವರುಣ್ ಚೌಟ, ಶ್ವೇತ ಪೂಜಾರಿ, ಸರಿತ ಶಶಿಧರ್, ಆಯುಕ್ತರಾದ ಅಕ್ಷಯ್ ಶ್ರೀಧರ್, ಮುಖ್ಯ ಎಂಜಿನಿಯರ್ ಗುರುಪ್ರಸಾದ್, ವಲಯ ಆಯುಕ್ತ ಅತಿಕ್ ರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.

ಮಾರ್ಕೆಟ್ ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ 50 ಕೋಟಿಯನ್ನು ರಾಜ್ಯಸರಕಾರ ಬಿಡುಗಡೆ ಮಾಡಿದ್ದು ಪಾಲಿಕೆ 11 ಕೋಟಿ ರೂ.ಕಾದಿರಿಸಿದೆ. ಇದೀಗ ಹೆಚ್ಚುವ 14 ಕೋಟಿ ರೂ.ಸಿಗಲಿದೆ. ಇದುವರೆಗೆ ತಾಂತ್ರಿಕ ಕಾರಣಗಳಿಂದ 15 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಮುಡಾ ವಾಣಿಜ್ಯ ಸಂಕೀರ್ಣದಿಂದ ವ್ಯಾಪಾರಸ್ಥರನ್ನು ಸ್ಥಳಾಂತರಗೊಳಿಸಿದ ಬಳಿಕ ಕಟ್ಟಡದ ಕಾಮಗಾರಿ ಪುನರಾರಂಭಗೊಳ್ಳಲಿದೆ ಎಂದು ತಾಂತ್ರಿಕ ಸಮಸ್ಯೆಯನ್ನು ಸಚಿವರ ಗಮನಕ್ಕೆ ಶಾಸಕರು ತಂದರು.

Edited By : Nagesh Gaonkar
Kshetra Samachara

Kshetra Samachara

01/02/2022 10:52 pm

Cinque Terre

10.36 K

Cinque Terre

0

ಸಂಬಂಧಿತ ಸುದ್ದಿ