ಸುರತ್ಕಲ್:ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಇಡ್ಯಾಪೂರ್ವ 6ನೇ ವಾರ್ಡ್ ನ ಜನತಾ ಕಾಲೋನಿ ಮುಖ್ಯ ರಸ್ತೆಯಿಂದ ಹಿಂದೂ ರುದ್ರಭೂಮಿ ತನಕ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡುವ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ ಚಾಲನೆ ನೀಡಿದರು.
ಜಲಸಿರಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದ ಕಾರಣ ರಸ್ತೆಗೆ ಕಾಂಕ್ರೆಟ್ ಹಾಕುವ ಕಾಮಗಾರಿ ವಿಳಂಬವಾಗಿತ್ತು. ಕಾಂಕ್ರೀಟ್ ಹಾಕಿದ ಬಳಿಕ ಹಲವು ಬಾರಿ ರಸ್ತೆ ಅಗೆದು ತೆರಿಗೆ ಹಣ ಪೋಲು ಮಾಡುವುದಕ್ಕಿಂತ ಎಲ್ಲಾ ಕಾಮಗಾರಿ ಆದ ಬಳಿಕ ರಸ್ತೆ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ವಿಪಕ್ಷಗಳು ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಆಗಲಿದೆ ಎಂದು ತಿಳಿದು ಪ್ರಚಾರ ಪಡೆಯುವ ಉದ್ದೇಶದಿಂದ ಪ್ರತಿಭಟನೆ ಮುತ್ತಿಗೆಯ ನಾಟಕ ಮಾಡಲು ಮುಂದಾಗಿವೆ. ಜನತೆಗೆ ಸತ್ಯ ವಿಚಾರಗಳು ತಿಳಿದಿದೆ ಎಂದು ತಿರುಗೇಟು ನೀಡಿದರು
ಮ. ನ. ಪಾ ಸದಸ್ಯರುಗಳಾದ ಸರಿತಾ ಶಶಿಧರ್, ಲೋಕೇಶ್ ಬೊಳ್ಳಾಜೆ, ಶೋಭಾ ರಾಜೇಶ್, ಬಿಜೆಪಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/02/2022 09:04 pm