ಉಡುಪಿ: ಅಂಬೇಡ್ಕರ್ ಅವರ ಭಾವಚಿತ್ರ ತೆರವುಗೊಳಿಸಿದ ನ್ಯಾಯಾಧೀಶರ ವಿರುದ್ಧ ಉಡುಪಿಯಲ್ಲಿಂದು ಪಂಜಿನ ಮೆರವಣಿಗೆ ಮತ್ತು ಶವಯಾತ್ರೆ ನಡೆಯಿತು.ಅಂಬೇಡ್ಕರ್ ಯುವಸೇನೆ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.ಸಂಜೆ ಆರೂವರೆ ಸುಮಾರಿಗೆ ಉಡುಪಿಯ ಸಿಂಡಿಕೇಟ್ ಬ್ಯಾಂಕ್ ಟವರ್ ನಿಂದ ಕೆ.ಯಂ.ಮಾರ್ಗವಾಗಿ, ಜೋಡು ಕಟ್ಟೆಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕ ತನಕ " ಪಂಜಿನ ಮೆರವಣಿಗೆಯಲ್ಲಿ ಶವಯಾತ್ರೆ ನಡೆಯಿತು. ಈ ವೇಳೆ ಮಾತನಾಡಿದ ಮುಖಂಡರು ,ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾಗೊಳಿಸಬೇಕು.ಮತ್ತು ದೇಶದ್ರೋಹದ ಅಪಾದನೆ ಮೇಲೆ ಬಂಧಿಸಬೇಕು ಎಂದು ಆಗ್ರಹಿಸಿದರು.ಪಂಜಿನ ಮೆರವಣಿಗೆ ಹುತಾತ್ಮ ಸೈನಿಕ ಸ್ಮಾರಕದ ಬಳಿ ಸಮಾಪನಗೊಂಡಿತು.
Kshetra Samachara
29/01/2022 08:17 pm