ಮಂಗಳೂರು: ಸಿಎಂ ಇಬ್ರಾಹಿಂ ಪಕ್ಷ ತ್ಯಾಗಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಯುಟಿ ಖಾದರ್ ಅವರು ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದಲ್ಲೇ ಇರ್ತಾರೆ. ಅವರು ಜನತಾದಳಕ್ಕೆ ಹೋಗಲ್ಲ. ಅವರು ನೋವಿನಿಂದ ಮಾತಾಡಿರಬಹುದು. ಕಾಂಗ್ರೆಸ್ ನಾಯಕರಿಗೆ ಉತ್ತಮ ಹುದ್ದೆ ಸಿಕ್ಕಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು. ಸಿಎಂ ಇಬ್ರಾಹಿಂರಿಗೆ ಮುಂದೆ ದೊಡ್ಡ ಹುದ್ದೆಯನ್ನು ನೀಡಬಹುದು ಎಂದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತಾ ಅಧಿಕಾರಕ್ಕೆ ಬರ್ತದೆ ಎಂದು ಭವಿಷ್ಯ ನುಡಿದರು.
PublicNext
29/01/2022 07:40 pm