ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಮಲ್ಪೆ ಬೀಚ್ ಬದಿಯಲ್ಲಿ ಕಸ ವಿಲೇವಾರಿ ಮಾಡದ ನಗರಸಭೆ: ಸಾಮಾನ್ಯ ಸಭೆಯಲ್ಲಿ ಆಕ್ರೋಶ!

ಉಡುಪಿ: ನಗರಸಭೆಯ ಸಾಮಾನ್ಯ ಸಭೆ ಇಂದು ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಲ್ಪೆ ಭಾಗದಲ್ಲಿನ ಕಸದ ಸಮಸ್ಯೆ, ಹೆದ್ದಾರಿ ಬದಿ ಲೈಟ್ ಉರಿಯದೇ ಇರುವುದು, ಕಟ್ಟಡ ಪರವಾನಿಗೆಯಲ್ಲಿ ಇಂಜಿನಿಯರ್ ಗಳ ಕಡ್ಡಾಯ ಸಹಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಮಲ್ಪೆ ಬೀಚ್ ಹತ್ತಿರ ಕಳೆದ ಒಂದು ವಾರದಿಂದ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಉಡುಪಿ ನಗರಸಭೆಯಲ್ಲಿ ವಿಚಾರಿಸಿದರೆ ಅದು ಬೀಚ್ ಅಭಿವೃದ್ಧಿ ಸಮಿತಿಯವರು ತೆಗೆಯುತ್ತಾರೆ ಎಂಬ ಉತ್ತರ ನೀಡುತ್ತಾರೆ. ಆದರೆ ಬೀಚ್ ಅಭಿವೃದ್ಧಿ ಸಮಿತಿಯವರು ಮನೆಯವರು ಹಾಕುವ ಕಸ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಇದರಿಂದ ಕಳೆದ ಒಂದು ವಾರದಿಂದ ಕಸ ವಿಲೇವಾರಿ ಆಗುತ್ತಿಲ್ಲ. ಈ ಬಗ್ಗೆ ಸದಸ್ಯೆ ಎಡ್ಲಿನಾ ಕರ್ಕಡ ಆಕ್ರೋಶ ವ್ಯಕ್ತಪಡಿಸಿದರು.

ಯಾರು ಕಸ ಹಾಕುತ್ತಾರೆ, ಆ ಮನೆಗಳಿಗೆ ನೋಟಿಸ್ ನೀಡಿ ಒಂದೆರಡು ದಿನಗಳಲ್ಲಿ ಕಸ ವಿಲೇವಾರಿ ಮಾಡುತ್ತೇವೆ ಎಂದು ಅಧಿಕಾರಿಗಳು ಹಾಗೂ ಅಧ್ಯಕ್ಷರು ಉತ್ತರ ನೀಡಿದರು.

ನಗರಸಭೆ ಸದಸ್ಯ ವಿಜಯ ಕೊಡವೂರು ದಿವ್ಯಾಂಗರಿಗೆ ನಗರಸಭೆಯ ಶೇಕಡಾ ಐದರ ನಿಧಿಯಡಿಯಲ್ಲಿ ಸೇವಾ ಸವಲತ್ತುಗಳು ತಲುಪುತ್ತಿಲ್ಲ ಎಂದರು. ಇನ್ನು ವಾಹನಗಳ ರಿಪೇರಿ ಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ಮಾಹಿತಿ ಕೇಳಿದ್ದು ಇದುವರೆಗೆ ಅಧಿಕಾರಿಗಳು ಉತ್ತರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ರಮೇಶ್ ಕಾಂಚನ್ ಅಂಬಲಪಾಡಿಯಿಂದ ನಿಟ್ಟೂರು ತನಕ ಸರ್ವಿಸ್ ರಸ್ತೆಯ ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಇದರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗಮನ ಸೆಳೆದರು. ಈ ಬಗ್ಗೆ ಇತರ ಸದಸ್ಯರು ಕೂಡ ದ್ವನಿಗೂಡಿಸಿ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗೆ ಶೀಘ್ರ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.

Edited By : Shivu K
Kshetra Samachara

Kshetra Samachara

28/01/2022 10:15 pm

Cinque Terre

14.98 K

Cinque Terre

0

ಸಂಬಂಧಿತ ಸುದ್ದಿ