ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಬ್ರಿಟಿಷರ ಚಾಲೆಂಜ್ ಗೂ ಭಯ ಪಡದ ಕಾಂಗ್ರೆಸ್ಸಿಗರು ನಾವು"

ಮಂಗಳೂರು: ನವದೆಹಲಿ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ ವಿರೋಧಿಸಿ ಜ. 26ರಂದು ಸ್ವಾಭಿಮಾನ ಯಾತ್ರೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಬಿಜೆಪಿ ನಾಯಕರ ಹೇಳಿಕೆಯೊಂದರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆಂದರೆ ಅದಕ್ಕೆ ವಿರುದ್ಧವಾಗಿ ನೂರು ಪಟ್ಟು ಹೆಚ್ಚಾಗಿ ಪ್ರತಿಭಟನೆ ಮಾಡುವ ಶಕ್ತಿ ನಮಗಿದೆ ಎಂದರು. ಬ್ರಿಟಿಷರ ಚಾಲೆಂಜ್ ಗೂ ಭಯಪಡದ ಕಾಂಗ್ರೆಸ್ಸಿಗರು ನಾವು. ಬಿಜೆಪಿಯವರ ಸವಾಲು, ಪ್ರತಿಭಟನೆಗಳು ಕೇವಲ ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎಂಬಂತೆ. ಅವರೂ ಈ ವಿಷಯದಲ್ಲಿ ಪ್ರತಿಭಟನೆ ನಡೆಸುತ್ತಾರೆಂದರೆ ತಪ್ಪನ್ನು ಒಪ್ಪಿಕೊಂಡಂತೆ ಎಂದರು.

Edited By : Shivu K
Kshetra Samachara

Kshetra Samachara

25/01/2022 02:38 pm

Cinque Terre

4.15 K

Cinque Terre

2

ಸಂಬಂಧಿತ ಸುದ್ದಿ