ಉಡುಪಿ: ಜನವರಿ 24 ರಂದು ಕವಿ ಮುದ್ದಣ ಜಯಂತಿ ಆಚರಿಸಲ್ಪಡುವುದು ವಾಡಿಕೆ.ಉಡುಪಿಯ ಕವಿ ಮುದ್ದಣ ಮಾರ್ಗ ದಲ್ಲಿರುವ ನಗರಸಭೆ ಕಛೇರಿಯ ಸಮೀಪ ಕವಿ ಮುದ್ದಣರ ಪುತ್ಥಳಿಯೂ ಇದೆ. ಹಲವಾರು ಕೃತಿಗಳನ್ನು ಅಕ್ಷರ ಸರಸ್ವತಿಯ ಮಡಿಲಿಗೆ ಸಮರ್ಪಿಸಿರುವ ಕನ್ನಡನಾಡಿನ ಮೇರುಕವಿಯಾಗಿರುವ ಕವಿ ಮುದ್ದಣರಿಗೆ ಗೌರವ ಸಲ್ಲಿಸುವ ಸಂಪ್ರದಾಯವನ್ನು ಉಡುಪಿ ನಗರಾಡಳಿತವು ಮರೆತಿರುವುದರ ಬಗ್ಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.ಈ ಬಗ್ಗೆ ಸಮಿತಿ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಸಾಹಿತಿ ತಾರಾನಾಥ್ ಮೇಸ್ತ ವಿಷಾದ ವ್ಯಕ್ತಪಡಿಸಿದ್ದು ಇನ್ನು ಮುಂದೆಯಾದರೂ ಉಡುಪಿ ಜಿಲ್ಲೆಯ ಹಿರಿಯ ಕವಿಯನ್ನು ಸ್ಮರಿಸುವ ಕಾರ್ಯವು ನಗರಾಡಳಿತದಿಂದ ನಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.
Kshetra Samachara
25/01/2022 12:40 pm