ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಕೇರಳ ಸರ್ಕಾರದಿಂದ ಗೊಂದಲ ನಿರ್ಮಾಣ; ಕಾಂಗ್ರೆಸ್ ವೈಭವೀಕರಣ"

ಮಂಗಳೂರು: ನವದೆಹಲಿ ಗಣರಾಜ್ಯೋತ್ಸವದಲ್ಲಿ ಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕರಿಸಿರುವ ವಿವಾದಕ್ಕೂ ಪ್ರಧಾನಿ ಹಾಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವಿನಾಕಾರಣ ಕೇರಳ ಸರ್ಕಾರ ಈ ಗೊಂದಲ ಸೃಷ್ಟಿ ಮಾಡಿದೆ. ಅದನ್ನು ಕಾಂಗ್ರೆಸ್ ವೈಭವೀಕರಿಸುತ್ತಿದೆ ಎಂದು ದೂರಿದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಅವರಿಗೆ ವಾಸ್ತವತೆ ತಿಳಿಸಿದ್ದೇವೆ. ಈ ವಿಚಾರದಲ್ಲಿ ಕೇರಳದ ಕಮ್ಯೂನಿಸ್ಟ್ ಸರ್ಕಾರ ದುರುದ್ದೇಶ ಪೂರಿತವಾಗಿ ಸುಳ್ಳು ಆರೋಪದಲ್ಲಿ ತೊಡಗಿ, ಗೊಂದಲ ನಿರ್ಮಿಸಿದೆ. ಇದಕ್ಕೆ ಕಾಂಗ್ರೆಸ್ ಕೂಡ ಕುಮ್ಮಕ್ಕು ನೀಡುತ್ತಾ ವಾತಾವರಣವನ್ನು ಮತ್ತಷ್ಟು ಹದಗೆಡಿಸುತ್ತಿದೆ ಎಂದರು.

Edited By : Shivu K
Kshetra Samachara

Kshetra Samachara

25/01/2022 11:37 am

Cinque Terre

14.17 K

Cinque Terre

4

ಸಂಬಂಧಿತ ಸುದ್ದಿ