ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿ.ಕೆ.ಹರಿಪ್ರಸಾದ್ ಪುಸ್ತಕ ಬಿಡುಗಡೆ ಸಂದರ್ಭ ಭಾಷಣಕ್ಕೆ ಅಡ್ಡಿ!

ಉಡುಪಿ: ಉಡುಪಿಯಲ್ಲಿ ಬಿ.ಕೆ ಹರಿಪ್ರಸಾದ್ ಪುಸ್ತಕ ಬಿಡುಗಡೆ ಸಂದರ್ಭ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.

ತುಳು-ಕೊಡವ ಭಾಷೆಗಳ ಅಳಿವು ಉಳಿವು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ಕುರಿತಂತೆ ಒತ್ತಾಯಿಸಿ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಸಂಸತ್‌ನಲ್ಲಿ ಮಾಡಿದ ಭಾಷಣಗಳ ಸಂಗ್ರಹದ ಕೃತಿ ಬಿಡುಗಡೆ ಕಾರ್ಯಕ್ರಮ ಇದಾಗಿತ್ತು.

ಉಡುಪಿಯ ಬಡಗುಬೆಟ್ಟು ಸಭಾಭವನದಲ್ಲಿ ಶಿಕ್ಷಣ ತಜ್ಞ ಹಾಗೂ ಡಾ.ಟಿಎಂಎಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್ ಭಾಷಣ ಮಾಡುತ್ತಿದ್ದರು.ಈ ಸಂದರ್ಭ ಆರೆಸ್ಸೆಸ್ ಸಂಘಟನೆ ಕುರಿತು ಡಾ. ಮಹಾಬಲೇಶ್ವರ ರಾವ್ ಮಾತನಾಡಿದಾಗ,ಸಭಿಕರ ಸಾಲಿನಲ್ಲಿದ್ದ ನಗರಸಭೆ ಸದಸ್ಯ ವಿಜಯ್ ಕೊಡವೂರು ,ಭಾಷಣದ ಮಧ್ಯೆಯೇ ,ನೀವಿಲ್ಲಿ ರಾಜಕೀಯ ಮಾತನಾಡಬೇಡಿ ಎಂದು ಭಾಷಣಕ್ಕೆ ಅಡ್ಡಿಪಡಿಸಿದರು.ಈ ವೇಳೆ ಸಂಘಟಕರು ಅವರನ್ನು ಸಮಾಧಾನ ಪಡಿಸಿ ಕೂರಿಸಿದರು.

Edited By : Nagesh Gaonkar
Kshetra Samachara

Kshetra Samachara

24/01/2022 07:42 pm

Cinque Terre

5.31 K

Cinque Terre

0

ಸಂಬಂಧಿತ ಸುದ್ದಿ