ಮಂಗಳೂರು: ಕೇಂದ್ರ ಸರಕಾರವು ಗಣರಾಜೋತ್ಸವ ಪೆರೇಡ್ ನಲ್ಲಿ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿದೆ ಎಂಬುದನ್ನು ವಿರೋಧಿಸಿ ಜ. 26ರಂದು ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯಲಿರುವ ಮೆರವಣಿಗೆ ಪಕ್ಷಾತೀತವಾಗಿ ನಡೆಯಲಿ ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಮಂಗಳೂರಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನದಂದು ಜಿಲ್ಲೆಯಲ್ಲಿ ಕೆಲವು ಸಂಘಟನೆಗಳು ಕುದ್ರೋಳಿ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಹೊರಡಲಿವೆ. ಈ ಹಿಂದೆ ಶ್ರೀ ನಾರಾಯಣ ಗುರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ಸಿನ ನಾಯಕರು ಇಂದು ಏಕಾಏಕಿ ಗುರುಗಳ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ದಿನೇಶ್ ಅಮೀನ್ ಮಟ್ಟು ಶ್ರೀ ನಾರಾಯಣ ಗುರುಗಳನ್ನು ನಿಂದಿಸಿದಾಗ ಅಂದು ಚಕಾರ ಎತ್ತದವರು ಈಗ ಮಾತನಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು. ಜನಾರ್ದನ ಪೂಜಾರಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಇವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರು ರಾಜಕೀಯ ಮಾಡುವುದನ್ನು ಬಿಡಲಿ. ನಾಡಿದ್ದು ನಡೆಯುವ ಮೆರವಣಿಗೆ ಜಾತಿ-ಬೇಧ ರಹಿತವಾಗಿ ನಡೆಯಲಿ ಎಂದರು
Kshetra Samachara
22/01/2022 02:57 pm