ಉಡುಪಿ; ಎರಡು ವರ್ಷಗಳ ಕಾಲ ಕೊರೋನಾ ಮಹಾಮಾರಿಯ ಹೊಡೆತಕ್ಕೆ ಬಾರ್ ವೈನ್ ಶಾಪ್ ಉದ್ಯಮ ನೆಲಕ್ಕಚ್ಚಿದೆ. ಮಾಲೀಕರು ಆಕ್ಸಿಜನ್ ನಲ್ಲಿದ್ದಾರೆ, ದಯವಿಟ್ಟು ವೀಕೆಂಡ್ ಕರ್ಪ್ಯೂ ಕೈಬಿಡಿ ಎಂದು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಶಿಯೇಶನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ವಿನಂತಿಸಿದ್ದಾರೆ.
ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರಿದರೆ ನಾವು ವೆಂಟಿಲೇಟರ್ ಗೆ ಹೋಗ್ತೇವೆ. ಎರಡು ವೀಕೆಂಡ್ ಕರ್ಪ್ಯೂ ನಿಂದ ಕೋಟ್ಯಂತರ ರುಪಾಯಿ ನಷ್ಟವಾಗಿದೆ. ವಾರಾಂತ್ಯದ ಎಲ್ಲ ವ್ಯವಹಾರ ಕಳೆದುಕೊಂಡಿದ್ದೇವೆ ಎಂದರು.
ದಯವಿಟ್ಟು ನಮ್ಮ ದುಸ್ಥಿತಿ ಅರ್ಥಮಾಡಿಕೊಳ್ಳಿ. ವೀಕೆಂಡ್ ಕರ್ಪ್ಯೂ ರದ್ದುಮಾಡಿ, ನೈಟ್ ಕರ್ಪ್ಯೂ ಅವಧಿ ವಿಸ್ತರಿಸಿ. ಕರ್ಫ್ಯೂ ರದ್ದಾಗದಿದ್ದರೆ ಪಾರ್ಸೆಲ್ ನೀಡಲು ಅವಕಾಶ ಕೊಡಿ. ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ.ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಿ ಎಂದು ವಿನಂತಿ ಮಾಡಿದ್ದಾರೆ.
Kshetra Samachara
20/01/2022 08:52 pm