ಮಂಗಳೂರು: ಮಹಮ್ಮದ್ ಪೈಗಂಬರ್ ನ ಹೆಸರು ಬರೆದು ಕುತ್ತಿಗೆಯಲ್ಲಿ ಹಾಕಿ ಡಾನ್ಸ್ ಮಾಡಿದ್ರೆ ಅವರು ಬಿಡ್ತಾರಾ? ಬೆಂಕಿ ಹಚ್ಚುತ್ತಿದ್ದರು ಎಂದು ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಡಿಜೆ ಹಾಕಲಿ,ಡಾನ್ಸ್ ಮಾಡಲಿ ನಮ್ಮದು ಅಭ್ಯಂತರವಿಲ್ಲ ಅದರೆ ಈ ರೀತಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ರೆ ನಾವು ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯನಾ ಎಂದು ಪ್ರಶ್ನಿಸಿದರು.
ಕೊರಗಜ್ಜ ದೈವಕ್ಕೆ ಅಪಹಾಸ್ಯ ಮಾಡಿದವರನ್ನು ಮುಸ್ಲಿಂ ಸಮುದಾಯ ಖಂಡಿಸುವುದೇ ಅದಲ್ಲಿ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಅರೋಪಿಗಳನ್ನು ಜಮಾತಿನಿಂದ ಹೊರಗೆ ಹಾಕಿ ಅವರ ವಿರುದ್ಧ ಫತ್ವಾ ಜಾರಿ ಮಾಡಿ.ನೀವು ಜನರ ದಿಕ್ಕು ತಪ್ಪಿಸಬೇಡಿ ಅವರನ್ನು ಠಾಣೆಯಿಂದ ಬಿಡಿಸಿಕೊಂಡು ಬರಲು ಪ್ರಯತ್ನ ನಡೆಸಿದ್ರಿ ಈ ನಡುವೆ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸದಿದ್ದರೆ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
Kshetra Samachara
11/01/2022 08:16 pm