ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ ಬಂದ್‌ʼ ಗೆ ಬಹುತೇಕ ಬೆಂಬಲ; ಹಿಂಜಾವೇ ಸಭೆ, ಮೆರವಣಿಗೆ

ವಿಟ್ಲ: ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ʼವಿಟ್ಲ ಬಂದ್ʼ ಗೆ ಇಂದು ಬಹುತೇಕ ಕಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಶ್ರೀ ಕೊರಗಜ್ಜ ದೈವಕ್ಕೆ ಅವಹೇಳನ ಘಟನೆ ಖಂಡಿಸಿ ವಿಟ್ಲದಲ್ಲಿ ಹಿಂಜಾವೇ ಪ್ರತಿಭಟನೆ ನಡೆಸಿ, ಬಂದ್‌ ಗೆ ಕರೆ ನೀಡಿತ್ತು.

ಸಾಲೆತ್ತೂರಿನಲ್ಲಿಇತ್ತೀಚೆಗೆ ಮುಸ್ಲಿಂ ಮದುಮಗನೊಬ್ಬ ತನ್ನ ಮಿತ್ರರೊಡಗೂಡಿ ಶ್ರೀ ಕೊರಗಜ್ಜ ದೈವದ ವೇಷ-ಭೂಷಣ ಧರಿಸಿ, ಹಾವಭಾವ ಪ್ರದರ್ಶಿಸಿ, ಅವಮಾನ ಮಾಡಿದ್ದ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಬಂಧಿಸದ ಕಾರಣ ಬಂದ್ ಗೆ ಕರೆ ನೀಡಲಾಗಿತ್ತು.

ವಿಟ್ಲದ ಬಸ್ ನಿಲ್ದಾಣದಲ್ಲಿ ಬಹುತೇಕ ಅಂಗಡಿ ಮಾಲೀಕರು ಬಂದ್ ಗೆ ಬೆಂಬಲ ಸೂಚಿಸಿದರು. ಪುತ್ತೂರು ರಸ್ತೆಯಲ್ಲಿ ಮುಸ್ಲಿಮರ ಅಂಗಡಿಗಳು ಬಂದ್ ಗೆ ಬೆಂಬಲ ಸೂಚಿಸಿಲ್ಲ. ಇನ್ನು ಕೆಲವೆಡೆ ಎಲ್ಲರೂ ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತ ಪಡಿಸಿದರು. ಬಳಿಕ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಸಭೆ, ಮೆರವಣಿಗೆ ನಡೆದು, ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ರಾಧಾಕೃಷ್ಣ ಅಡ್ಯಂತ್ತಾಯ, ನರಸಿಂಹ ಶೆಟ್ಟಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
Kshetra Samachara

Kshetra Samachara

11/01/2022 01:04 pm

Cinque Terre

5.33 K

Cinque Terre

0

ಸಂಬಂಧಿತ ಸುದ್ದಿ