ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಳಿನ್ ಟೀಕೆ: ಸಿದ್ಧರಾಮಯ್ಯಗೆ ಸಚಿವ ಕೋಟ ತಿರುಗೇಟು!

ಉಡುಪಿ: ನಳಿನ್ ಕುಮಾರ್ ಕಟೀಲು ಎಳಸು ರಾಜಕಾರಣಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದಕ್ಕೆ ಸಚಿವ ಕೋಟ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಿದ್ದರಾಮಯ್ಯ ಅವರ ಶಬ್ದ ಪ್ರಯೋಗದ ಹಿಂದಿನ ಭಾವನೆ ನನಗೆ ಗೊತ್ತಿಲ್ಲ. ಆದರೆ ಕಟೀಲ್ ಎಳಸುತನ ಪ್ರಾಯದ ಬಗ್ಗೆ ನನಗೆ ಹೆಮ್ಮೆಯಿದೆ ವಯೋವೃದ್ಧರನ್ನು ರಾಜ್ಯಾಧ್ಯಕ್ಷ ಮಾಡುವ ಪರಿಪಾಠ ಇದೆ.ಆದರೆ ಸಂಘಟನೆಯ ಆಧಾರದಲ್ಲಿ ಅಧಿಕಾರ ಪಡೆದ ಯುವಕ ಕಟೀಲ್ ಎಂದು ತಿರುಗೇಟು ನೀಡಿದ್ದಾರೆ.

ನಾನು ಒಂದು ರೂಪಾಯಿ ಖರ್ಚು ಮಾಡದೆ ಗೆದ್ದಿದ್ದರೆ ಅದು ಕಟೀಲ್ ರಿಂದ. ಮುಂದಿನ ಚುನಾವಣೆ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಎಂದು ಯಡಿಯೂರಪ್ಪ ಹಿಂದೆ ಹೇಳಿದ್ದರು.ನಳಿನ್ ಅವರ ಸಂಘಟನೆ ಸಿದ್ದರಾಮಯ್ಯಗೆ ಕಂಟಕ ಆಗಬಹುದು ಎಂದು ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Edited By : Manjunath H D
PublicNext

PublicNext

08/01/2022 02:25 pm

Cinque Terre

52.6 K

Cinque Terre

7

ಸಂಬಂಧಿತ ಸುದ್ದಿ