ಉಡುಪಿ: ಮಂಗಳೂರು ಎನ್ ಐಎ ದಾಳಿಯಲ್ಲಿ ಬಂಧನವಾದ ಮರಿಯಂ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯಲ್ಲಿ ಗುರುತಿಸಿದ್ದಾಳೆ. ಈಕೆ ಸ್ಥಳೀಯ ಯುವಕ ಯುವತಿಯರನ್ನು ಭಯೋತ್ಪಾದನೆ ಕೃತ್ಯಕ್ಕೆ ಜೋಡಿಸುತ್ತಿದ್ದಳು. ಕರಾವಳಿಯಲ್ಲಿ ಲವ್ ಹೆಸರಿನಲ್ಲಿ ಜಿಹಾದ್ ನಡೆಯುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಲವ್ ಜಿಹಾದ್ ವಿರುದ್ಧ ಸೂಕ್ತ ಕಾನೂನು ತರಬೇಕು ಎಂದು ಉಡುಪಿಯಲ್ಲಿ ಭಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ ಆರ್ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಮೂಲಕ ಭಯೋತ್ಪಾದನೆ ಸಂಘಟನೆಗೆ ಮಹಿಳೆಯರ ಜೋಡಣೆ ನಡೆಸಲಾಗುತ್ತದೆ. ಮಹಿಳೆಯರನ್ನು ಮಕ್ಕಳು ಹೆರುವ ಯಂತ್ರ ಮಾಡಲಾಗುತ್ತದೆ. ಮಾಜಿ ಶಾಸಕ ಇದ್ದಿನಬ್ಬ ಮೊಮ್ಮಗ ಭಯೋತ್ಪಾದಕ ಚಟುವಟಿಕೆಯಲ್ಲಿ ಗುರುತಿಸಿದ್ದಕ್ಕೆ ಬಂಧನವಾಗಿದೆ.ಅಲ್ಲದೇ ಮಂಗಳೂರು ಭಯೋತ್ಪಾದಕರ ಪ್ರಯೋಗ ಶಾಲೆಯಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ತನಿಖಾ ದಳ ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸಬೇಕು ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ ಆರ್ ಆಗ್ರಹಿಸಿದ್ದಾರೆ.
PublicNext
04/01/2022 04:45 pm