ಮುಲ್ಕಿ: ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕೊರಗರ ಕಾಲೊನಿಗೆ ಮುಲ್ಕಿ ತಹಸೀಲ್ದಾರ್ ಕಮಲಮ್ಮ, ಸಮಾಜ ಕಲ್ಯಾಣ ಇಲಾಖೆಯ ಸುನಿತಾ ಸಹಿತ ನಾನಾ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷೆ ಲೀಲಾವತಿ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು.
ಈ ಭಾಗದಲ್ಲಿ ಪ್ರತಿ ಕುಟುಂಬದ ಕೂಡುಕಟ್ಟಿನ ಜಾಗದ ಸಮಸ್ಯೆ ಇದ್ದು, ಪ್ರತಿ ಕುಟುಂಬಕ್ಕೆ ಸ್ವಂತ ಸ್ಥಳ ಒದಗಿಸುವಂತೆ ಕೊರಗ ಮುಖಂಡರು ಒತ್ತಾಯಿಸಿದರು.
ಆಗ ಕಂದಾಯ ನಿರೀಕ್ಷಕ ದಿನೇಶ್ ಉತ್ತರಿಸಿ, ಈ ಬಗ್ಗೆ ಕೊರಗ ಕುಟುಂಬದ ಎಲ್ಲ ಸದಸ್ಯರನ್ನು ಕರೆದು ತುರ್ತಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಕೊರಗ ಕಾಲೊನಿ ಆಟೋ ಚಾಲಕ ರಾಜು ಮಾತನಾಡಿ, ಐದು ವರ್ಷದಿಂದ ಇದುವರೆಗೆ ಸ್ವಂತ ಮನೆ ಕಟ್ಟಲು ಸರಕಾರದಿಂದ ಸವಲತ್ತು ದೊರೆಯುತ್ತಿಲ್ಲ ಎಂದರು. ಕಾಲೊನಿಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ಮಹಿಳೆಯರು ಅಲವತ್ತುಕೊಂಡರು.
ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಪಂ. ಸಿಬ್ಬಂದಿಗೆ ಸೂಚಿಸಿದರು.
ಮುಂದೆ ಪ್ರತಿ ಕೊರಗ ಕುಟುಂಬದ ಸದಸ್ಯರಿಗೆ ಆಧಾರ್ ಕಾರ್ಡ್, ಮತದಾರರ ಪಟ್ಟಿ ಸೇರ್ಪಡೆ, ಜಾತಿ ಪತ್ರ ನವೀಕರಣ ಸಹಿತ ಮೂಲ ಸೌಕರ್ಯ ಅಭಿಯಾನ ನಡೆಯಲಿದೆ ಎಂದು ತಹಸೀಲ್ದಾರ್ ಕಮಲಮ್ಮ ತಿಳಿಸಿದರು.
ಪಿಡಿಒ ಪೂರ್ಣಿಮಾ ಮಾತನಾಡಿ, ಎಲ್ಲರೂ ಕೊರೊನಾ ಲಸಿಕೆ ಪಡೆದುಕೊಳ್ಳಿ, ಮಕ್ಕಳಿಗೂ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಕೃಷಿ ಅಧಿಕಾರಿ ಅಬ್ದುಲ್ ಬಷೀರ್ ಕೃಷಿ ಮಾಹಿತಿ ನೀಡಿದರು.
Kshetra Samachara
03/01/2022 07:41 pm