ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋಟೆಕಾರಿನಲ್ಲಿ ಕಾಂಗ್ರೆಸ್ ಗೆ ಸೀಟ್ ಕಡಿಮೆ ಬಂದರೂ, ಮತ ಸಂಖ್ಯೆಯಲ್ಲಿ ಹೆಚ್ಚಳ; ಖಾದರ್

ಮಂಗಳೂರು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೋಟೆಕಾರಿನಲ್ಲಿ ಕಾಂಗ್ರೆಸ್ ಗೆ ಕಡಿಮೆ ಸೀಟ್ ಬಂದರೂ, ಒಟ್ಟಾರೆ ಮತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮಾಜಿ ಸಚಿವ, ಉಳ್ಳಾಲ ಶಾಸಕ ಯು.ಟಿ‌.ಖಾದರ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಗೆ ಕಳೆದ ಬಾರಿಯಷ್ಟೇ ಈ ಬಾರಿಯೂ ಮತ ದೊರಕಿದೆ. ಆದರೆ, ನಾವು ನಾಲ್ಕು ಸೀಟ್ ಗಳನ್ನು 2 ಸಂಖ್ಯೆಯಲ್ಲಿ, ಒಂದು ಸೀಟನ್ನು ಕೇವಲ ಮೂರು ಮತಗಳ ಅಂತರದಲ್ಲಿ ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಹಿಂದಿನಿಂದಲೂ ಈ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಇಲ್ಲಿನ ಮತದಾರರು ಕಾಂಗ್ರೆಸ್ ನತ್ತ ಒಲವುಳ್ಳವರು‌. ಕಾಂಗ್ರೆಸ್ ಗೆ ಸೀಟ್ ಕಡಿಮೆ ಬಂದಿರುವುದರಿಂದ ಅಧಿಕಾರ ತಪ್ಪಿದೆ. ಆದರೆ, ಎಂಎಲ್ಎ, ಎಂಪಿ ಚುನಾವಣೆ ಗಮನಿಸಿದರೆ ಈ ಬಾರಿ ಕಾಂಗ್ರೆಸ್ ಗೆ ಹೆಚ್ಚಿನ ಮತ ಲಭ್ಯವಾಗಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

01/01/2022 09:19 pm

Cinque Terre

5.49 K

Cinque Terre

1

ಸಂಬಂಧಿತ ಸುದ್ದಿ