ಉಡುಪಿ : ಬ್ರಹ್ಮಾವರ ತಾಲೂಕಿನ ಕೋಟತಟ್ಟು ಕೊರಗ ಕಾಲನಿಯ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಘಟನೆಯನ್ನು ಸಿಒಡಿ ತನಿಖೆಗೆ ಆದೇಶ ನೀಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.ಕೋಟದ ಕೊರಗರ ಕಾಲನಿಗೆ ಗೃಹ ಸಚಿವರು ಇಂದು ಭೇಟಿ ನೀಡಿದ ಬಳಿಕ ಅವರು ಸಿಓಡಿ ತನಿಖೆಗೆ ಆದೇಶಿಸಿದರು.
ಇದೇ ವೇಳೆ ಲಾಠಿಚಾರ್ಜ್ ನಿಂದ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ಅದರಲ್ಲಿ 6 ಕುಟುಂಬಗಳಿಗೆ 50 ಸಾವಿರ ರೂ. ಚೆಕ್ ವಿತರಿಸಿದರು. ಅವರ ವಿರುದ್ಧ ದಾಖಲಾದ ಕೇಸ್ ಅನ್ನು ಸರಕಾರದ ಮುಖಾಂತರ ವಾಪಸ್ ಪಡೆಯಲು ಕ್ರಮ ಜರಗಿಸುವುದಾಗಿ ಸಚಿವರು ಭರವಸೆ ನೀಡಿದರು.
Kshetra Samachara
01/01/2022 01:19 pm