ಪುತ್ತೂರು: ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ ಪ್ರತಿಪಕ್ಷಗಳು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿವೆ. ಆದರೆ, ನಮಗೆ ಚುನಾವಣೆ ಮುಖ್ಯವಲ್ಲ, ದೇಶದ ಮುಂದಿನ ಭವಿಷ್ಯ ಮುಖ್ಯ. ಧರ್ಮ ರಕ್ಷಣೆಗಾಗಿ ಈ ಕಾಯ್ದೆ ಅನಿವಾರ್ಯ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಪಾದಿಸಿದ್ದಾರೆ.
ಪುತ್ತೂರಿನಲ್ಲಿ ಇಂದು ನಡೆದ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ನನ್ನಲ್ಲಿ ಜೆಡಿಎಸ್ ನ ಹಿರಿಯ ಶಾಸಕರೊಬ್ಬರು ಇದೇ ಮಾತನ್ನು ಹೇಳಿದ್ದಾರೆ. ಅವರ ಕ್ಷೇತ್ರದಲ್ಲಿ16 ಸಾವಿರ ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ʼಇಂದು ಕ್ರಿಸ್ಮಸ್ ಆಚರಣೆಗಾಗಿ 25 ಕಡೆಗಳಲ್ಲಿ ಆಹ್ವಾನಿಸಿದ್ದಾರೆ. ಈ ರೀತಿಯ ಪರಿಸ್ಥಿತಿಯಿರುವಾಗ ತಾನು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿದರೆ ಮುಂದಿನ ಚುನಾವಣೆಯಲ್ಲಿ ತನಗೆ ತೊಂದರೆಯಾಗಲಿದೆʼ ಎಂದಿದ್ದಾರೆʼ ಎಂದು ಆರಗ ತಿಳಿಸಿದರು.
PublicNext
25/12/2021 07:09 pm