ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಿಳೆಯರ ಮದುವೆ ವಯಸ್ಸು 21 ಮಾಡಿರುವುದರ ಹಿಂದೆ ದೂರದೃಷ್ಟಿಯಿದೆ: ಅಣ್ಣಾಮಲೈ

ಉಡುಪಿ: ಮಹಿಳೆಯರ ಮದುವೆ ವಯಸ್ಸನ್ನು 18ರಿಂದ 21 ಮಾಡಿ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ.ಈ ನಿರ್ಣಯ ದೂರದೃಷ್ಟಿಯನ್ನು ಹೊಂದಿದೆ.ಯುವತಿಯರು ತಮ್ಮ ವಿದ್ಯಾಭ್ಯಾಸ ಮುಗಿಸುವಾಗಲೇ 21 ವರ್ಷ ಆಗಿರುತ್ತದೆ. ಹೀಗಾಗಿ ಇದೊಂದು ದೂರದೃಷ್ಟಿಯ, ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಕಾಯ್ದೆಯಾಗಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ,ಬಿಜೆಪಿ ಮುಖಂಡ ಅಣ್ಣಾಮಲೈ ಹೇಳಿದ್ದಾರೆ.

ಉಡುಪಿಯ ರಾಜಾಂಗಣದಲ್ಲಿ ವಿಶ್ವಾರ್ಪಣಮ್ ಎಂಬ ಕಾರ್ಯಕ್ರಮ ಹಲವು ದಿನಗಳಿಂದ ನಡೆಯುತ್ತಿದೆ.ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮುಖಂಡ ಅಣ್ಣಾಮಲೈ , ಹಿಂದೆಲ್ಲ 17, 18 ವರ್ಷಕ್ಕೇ ಹೆಣ್ಣುಮಕ್ಕಳು ಮಗುವನ್ನು ಪಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಹೆಚ್ಚುಕಡಿಮೆ ಈ ವಯಸ್ಸಿನಲ್ಲಿ ಅವರ ಮನಸ್ಸು ಮಗುವಿನ ರೀತಿ ಇರುತ್ತದೆ. ಹೀಗಾಗಿ ಈ ಹೊಸ ಕಾಯಿದೆ ಮಹಿಳಾ ಸಬಲೀಕರಣದ ದೂರದೃಷ್ಟಿಯಿಂದ ಕೂಡಿದೆ ಎಂದು ಅಣ್ಣಾಮಲೈ ಸಮರ್ಥಿಸಿಕೊಂಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/12/2021 09:14 pm

Cinque Terre

20.3 K

Cinque Terre

14

ಸಂಬಂಧಿತ ಸುದ್ದಿ