ಬಜಪೆ:ವಿಜಯ ಯುವ ಸಂಗಮ ಎಕ್ಕಾರು ಸಂಸ್ಥೆಯ ರಜತ ವರ್ಷದ ಸವಿ ನೆನಪಿನಲ್ಲಿ 2ನೇ ಮನೆಯ ಕೊಡುಗೆಯಾಗಿ ಅಜಾತಶತ್ರು ಭಾರತದ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟು ಹಬ್ಬ ಡಿ.25ರಂದು ಬೆಳಿಗ್ಗೆ 9 ಗಂಟೆಗೆ ಬಡಗ ಎಕ್ಕಾರು ಗ್ರಾಮದ ಬಡಕರೆಯಲ್ಲಿ ಶ್ರೀಮತಿ ಗೀತಾ ತಾರನಾಥ್ ಇವರಿಗೆ ಸಂಸ್ಥೆಯ ವತಿಯಿಂದ ನಿರ್ಮಿಸಿ ಹಸ್ತಾಂತರಿಸಲಿರುವ ನೂತನ ಮನೆ 'ಸಂಗಮ' ದ ಗೃಹ ಪ್ರವೇಶ ಕಾರ್ಯಕ್ರಮವು ಎಕ್ಕಾರು ಶ್ರೀ ಭಾಸ್ಕರ ಭಟ್ ಅವರ ಪೌರೋಹಿತ್ಯದಲ್ಲಿ ನೆರವೇರಲಿದೆ.
ನೂತನ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಹಲವು ಗಣ್ಯಾತೀಗಣ್ಯರು ಭಾಗವಹಿಸಲಿದ್ದಾರೆ.
Kshetra Samachara
21/12/2021 04:35 pm