ಮುಲ್ಕಿ: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಷಿ ಮುಲ್ಕಿ ಗೆ ಭೇಟಿನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ರವರೊಡನೆ ಕನ್ನಡ ಸಾಹಿತ್ಯ ಪರಿಷತ್ತಿನ ಆಗುಹೋಗುಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಕನ್ನಡ ಭಾಷೆಗೆ ಮತ್ತಷ್ಟು ಪ್ರಾಧಾನ್ಯತೆ ನೀಡುವುದರ ಜೊತೆಗೆ ಭಾಷೆಯ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಹೊಸ ಚಿಂತನೆಗಳನ್ನು ಅಳವಡಿಸುವ ಯೋಜನೆ ರೂಪಿಸಿದ್ದು ಭಾಷಾಭಿಮಾನಿ ಗಳ ಸಹಕಾರ ಅಗತ್ಯ ಎಂದರು.
ನೂತನ ರಾಜ್ಯಾಧ್ಯಕ್ಷರನ್ನು ಸ್ವಾಗತಿಸಿ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಕನ್ನಡ ಭಾಷೆ ಬೆಳವಣಿಗೆ ಪ್ರೋತ್ಸಾಹಿಸಲು ವಿನಂತಿಸಿದರು. ಈ ಸಂದರ್ಭ ನೂತನ ದ ಕ ಹಾಗೂ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರುಗಳಾದ ಡಾ. ಎಂಪಿ ಶ್ರೀನಾಥ್ , ಸುರೇಂದ್ರ ಅಡಿಗ,ಸಾಹಿತಿ ಡಾ. ಹರಿಶ್ಚಂದ್ರ ಸಾಲ್ಯಾನ್, ಪ್ರಕಾಶ್ ಆಚಾರ್ಯ, ಶಶಿಧರ್ ಭಟ್,ಸಾಧು ಅಂಚನ್ ಮಟ್ಟು ನಿರಂಜನ್ ಭಟ್, ಮತ್ತಿತರರು ಉಪಸ್ಥಿತರಿದ್ದರು
Kshetra Samachara
20/12/2021 06:15 pm