ಮುಲ್ಕಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮುಲ್ಕಿ ವಲಯದ ವತಿಯಿಂದ ರಾಷ್ಟ್ರ ಕಂಡಂತಹ ಅದ್ಭುತ ಯೋಧ, ದೇಶದ ಮೊದಲ ರಕ್ಷಣಾ ಮುಖ್ಯಸ್ಥರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರೆ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ಕಾರ್ನಾಡ್ ಜಂಕ್ಷನ್ ಬಳಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಸೋಸಿಯೇಷನ್ ಅಧ್ಯಕ್ಷ ಶಿವರಾಮ ಕಾರ್ನಾಡ್ ಮಾತನಾಡಿ ರಾಷ್ಟ್ರದ ಭದ್ರತೆಗಾಗಿ ಹಗಲಿರುಳು ಶ್ರಮಿಸಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರ ನೆನಪು ನಮ್ಮ ಆದ್ಯ ಕರ್ತವ್ಯ ಎಂದರು. ಮುಲ್ಕಿ ನಪಂ ಸದಸ್ಯ ಪುತ್ತುಬಾವ, ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ಫೋಟೋಗ್ರಾಫರ್ ಅಸೋಸಿಯೇಷನ್ ಮುಲ್ಕಿ ವಲಯದ ಮಾಜೀ ಅಧ್ಯಕ್ಷ ನವೀನ್ ಚಂದ್ರ, ಮೋಹನ್ ರಾವ್ ಹಳೆಯಂಗಡಿ, ಲೈನಲ್ ಪಿಂಟೋ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/12/2021 04:59 pm