ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಡಾ.ಕೆ.ವಿ.ರೇಣುಕಾಪ್ರಸಾದ್ ಭರ್ಜರಿ ಗೆಲುವು

ಸುಳ್ಯ:ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ದ.ಕ.ಮತ ಕ್ಷೇತ್ರದಿಂದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನಕಾರ್ಯದರ್ಶಿ ಡಾ.ಕೆ.ವಿ.ರೇಣುಕಾ ಪ್ರಸಾದ್‌ರವರು ಗೆಲುವು ಸಾಧಿಸಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ, ಸಹೋದರ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ,ಡಾ.ಕೆ.ವಿ.ಚಿದಾನಂದರವರನ್ನು 1554 ಮತಗಳಿಂದ ಅವರು ಸೋಲಿಸಿದ್ದಾರೆ. ದ.ಕ.ಉಡುಪಿ ಮತ್ತು ಕಾಸರಗೋಡುಜಿಲ್ಲೆಗಳನ್ನೊಳಗೊಂಡ ಮತಕ್ಷೇತ್ರ ಇದಾಗಿದ್ದು, ಡಿ.12 ರಂದು ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿತ್ತು. ಡಾ.ಕೆ.ವಿ.ಚಿದಾನಂದ,ಡಾ.ಕೆ.ವಿ. ರೇಣುಕಾಪ್ರಸಾದ್ ಹಾಗೂ ಹೇಮಾನಂದ ಹಲ್ಲಡ್ಕ ಚುನಾವಣಾ ಕಣದಲ್ಲಿದ್ದರು.

ಇಂದು ಮತ ಎಣಿಕೆ ನಡೆದಿದ್ದು,ಡಾ.ಕೆ.ವಿ.ರೇಣುಕಾಪ್ರಸಾದ್‌ರವರು 3,295 ಮತಗಳನ್ನು,ಡಾ.ಕೆ.ವಿ.ಚಿದಾನಂದರವರು 1,741 ಮತಗಳನ್ನುಹಾಗೂ ಹೇಮಾನಂದ ಹಲ್ಲಡ್ಕ 346 ಮತಗಳನ್ನು ಪಡೆದಿದ್ದಾರೆ. 30 ಮತಗಳು ಅಸಿಂಧುವಾಗಿದ್ದು ಉಡುಪಿ ಮತಕಟ್ಟೆಹೊರತುಪಡಿಸಿ ಉಳಿದೆಲ್ಲ ಕಡೆ ಡಾ.ಕೆ.ವಿ.ರೇಣುಕಾಪ್ರಸಾದ್‌ ರವರು ಮುನ್ನಡೆ ಸಾಧಿಸಿದ್ದಾರೆ.

Edited By :
Kshetra Samachara

Kshetra Samachara

15/12/2021 02:34 pm

Cinque Terre

11.78 K

Cinque Terre

1

ಸಂಬಂಧಿತ ಸುದ್ದಿ