ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿಧಾನ ಪರಿಷತ್ ಚುನಾವಣೆ; ಹೋಬಳಿಯಲ್ಲಿ ಸಾಂಗ ಮತದಾನ

ಮುಲ್ಕಿ: ಮುಲ್ಕಿ ಹೋಬಳಿಯ 7 ಗ್ರಾಪಂ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ಕಿನ್ನಿಗೋಳಿ, ಕಟೀಲು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಒಳಗೊಂಡು ನೂತನವಾಗಿ ರಚನೆಯಾದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆಡಳಿತಕ್ಕೆ ಚುನಾವಣೆ ಘೋಷಣೆಯಾಗದೆ ಬಾಕಿ ಇರುವುದರಿಂದ ವಿಧಾನ ಪರಿಷತ್ ಚುನಾವಣೆಯಿಂದ ವಂಚಿತವಾಗಿದೆ.

ಕಾಂಗ್ರೆಸ್, ಬಿಜೆಪಿ ಹಾಗೂ ಎಸ್ ಡಿಪಿಐ ಅಭ್ಯರ್ಥಿಗಳು ಪರಿಷತ್ ಚುನಾವಣೆ ಕಣದಲ್ಲಿದ್ದು, ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಬಿರುಸಿನ ಮತದಾನ ನಡೆದಿದೆ.

ಹೆಚ್ಚಿನ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆಯೇ ಎಲ್ಲರೂ ಮತದಾನ ಮಾಡಿದ್ದಾರೆ.

ಎಸ್ ಡಿಪಿಐ ಅಭ್ಯರ್ಥಿ ಕಣದಲ್ಲಿರುವ ಕಾರಣ ಕಾಂಗ್ರೆಸ್ ಗೆ ಅಡ್ಡ ಮತದಾನದ ಭೀತಿ ಎದುರಾಗಿದೆ.

Edited By : Shivu K
Kshetra Samachara

Kshetra Samachara

10/12/2021 12:15 pm

Cinque Terre

5.2 K

Cinque Terre

0

ಸಂಬಂಧಿತ ಸುದ್ದಿ