ಮಂಗಳೂರು: "ಧಾರ್ಮಿಕ ಭಾವನೆಗಳನ್ನು ಕೆರಳಿಸಬೇಡಿ. ದೇವಸ್ಥಾನದಲ್ಲಿರುವ ಭಗವಾಧ್ವಜವನ್ನು ಎಸ್ ಐ ಸೌಮ್ಯಾ ತೆಗೆಯೋಕೇ ಹೇಳ್ತಾರೆ. ಇದೇನು ಘೋರಿ ಮೊಹಮ್ಮದ್ ಕಾಲವಾ..? ಟಿಪ್ಪು ಸುಲ್ತಾನ್ ಕಾಲವಾ..? ಸ್ಥಳೀಯ ಪೊಲೀಸರು ಭಗವಾಧ್ವಜವನ್ನು ತೆಗೆಯಲು ಹೇಳ್ತಾರಲ್ಲ..!? ನಾವು ಒಂದು ವಾರದಲ್ಲಿ ಸಾವಿರ ಧ್ವಜಗಳನ್ನು ಹಾಕ್ತೇವೆ ನೋಡಿ" ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಆಕ್ರೋಶ ಹೊರ ಹಾಕಿದ್ದಾರೆ.
ಅವರು ಮಂಗಳೂರಿನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
"ತಾಕತ್ತಿದ್ರೆ ಭಗವಾಧ್ವಜ ತೆಗೆಯಲಿ. ಇದನ್ನೆಲ್ಲ ಮಕ್ಕಳಾಟ ಅಂತಾ ಯೋಚಿಸಿದ್ರಾ..? ಹಿಂದೂ ಸಮಾಜ ಫುಟ್ಬಾಲ್ ಅಲ್ಲ, ಹಿಂದೂ ಸಮಾಜ ಕಲ್ಲುಗುಂಡು. ಕಾಲು ಮುರಿತ್ತೀವಿ ನಿಮ್ದು" ಎಂದವರು ಎಚ್ಚರಿಕೆ ನೀಡಿದ್ದಾರೆ.
Kshetra Samachara
25/11/2021 05:26 pm