ಕಾರ್ಕಳ: ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರು ಇಡುವ ವಿಚಾರವಾಗಿ ಮಾಜಿ ಸಚಿವ ಯುಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದರು.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸುನಿಲ್ ಕುಮಾರ್ , ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಚರ್ಚೆ ಮಾಡೋದು ಏನಿದೆ? ಸಾವರ್ಕರ್
ನಮ್ಮ ಸ್ವಾಭಿಮಾನದ ಸಂಕೇತ.ಖಾದರ್ ಸಾರರ್ಕರ್ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ.ಖಾದರ್ ಬೇಕಿದ್ದರೆ ಗೋಕಳ್ಳರ ಬಗ್ಗೆ ಮಾತನಾಡಲಿ.
ಸಾವರ್ಕರ್ ವಿಚಾರದಲ್ಲಿ ಖಾದರ್ ರಿಂದ ಪಾಠ ಕಲಿಯಬೇಕಿಲ್ಲ.ಅವರು ಅಂಡಮಾನ್ ಜೈಲಿಗೆ ಹೋಗಿ ನೋಡಿ ಬರಲಿ.ಗೋ ಕಳ್ಳರನ್ನು ಬಿಡಿಸಲು ಮಾತ್ರ ಜೈಲಿಗೆ ಹೋದವರಿಗೆ ಸಾವರ್ಕರ್ ಬಗ್ಗೆ ಏನ್ ಗೊತ್ತು? ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
13/11/2021 07:15 pm