ಉಡುಪಿ: ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಮತ್ತು ಪ್ರಮುಖ ವಿಚಾರಗಳ ಹೂರಣ ಬಿಜೆಪಿ ಜಿಲ್ಲಾ ವಾರ್ತಾ ಸಂಚಯ ತಂಡದ ಜೊತೆ ರಾಜ್ಯ ಬಿಜೆಪಿ ಧ್ಯೇಯ ಕಮಲ ಮಾಸ ಪತ್ರಿಕೆ ತಂಡದ ಸಭೆಯು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಬಿಜೆಪಿ ರಾಜ್ಯ ಪ್ರಕಾಶನ ಪ್ರಕೋಷ್ಠದ ಸಂಚಾಲಕರು ಮತ್ತು ರಾಜ್ಯ ಧ್ಯೇಯ ಕಮಲ ಮಾಸಪತ್ರಿಕೆ ಸಂಪಾದಕ ಬಿದರೆ ಪ್ರಕಾಶ್ ರವರು ಧ್ಯೇಯ ಕಮಲ, ಕಮಲ ಪುಷ್ಪ ಹಾಗೂ ಜಿಲ್ಲಾ ವಾರ್ತಾ ಸಂಚಯ ಸಂಕಲನದ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಧ್ಯೇಯ ಕಮಲ ಮಾಸ ಪತ್ರಿಕೆಯ ಸಹ ಸಂಪಾದಕ ಅಜಿತ್ ಶೆಟ್ಟಿ ಹೆರಂಜೆ, ಬಿಜೆಪಿ ಪ್ರಕಾಶನ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾದ ಶ್ರೀಕಾಂತ್, ಅನಿಲ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ ಕುಮಾರ್ ಉದ್ಯಾವರ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಪ್ರಕಾಶನ ಪ್ರಕೋಷ್ಠ ಸಂಚಾಲಕ ದುರ್ಗಾಪ್ರಸಾದ್, ಸಹ ಸಂಚಾಲಕ ಸತೀಶ್ ಕಾಡೋಳಿ, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಂಚಾಲಕ ಚಂದ್ರಶೇಖರ ಪ್ರಭು ಉಪಸ್ಥಿತರಿದ್ದರು.
Kshetra Samachara
12/11/2021 05:57 pm