ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಕೆರ್ನಡ್ಕದಲ್ಲಿ ಕುಡಿಯುವ ನೀರಿಗೆ ಜನತೆ ಮೊರೆ; ಪಂಚಾಯಿತಿ ಕೇರ್ ಲೆಸ್

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಪಂ ವ್ಯಾಪ್ತಿಯ ಕೆರ್ನಡ್ಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿ ಮೂರು ವರ್ಷಗಳೇ ಸಂದಿವೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಸಹಿತ ಸ್ಥಳೀಯರು ಗ್ರಾಪಂ, ಪುತ್ತೂರು ಉಪ ಆಯುಕ್ತರು, ಪುತ್ತೂರು ಇ.ಒ. ಸೇರಿದಂತೆ ಸಾಮಾನ್ಯವಾಗಿ ಎಲ್ಲ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೂ ನೀರಿನ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.

ಅಂದ ಹಾಗೆ, ಇಲ್ಲಿ ಕೊಳವೆ ಬಾವಿಯಲ್ಲಿ ನೀರಿಲ್ಲ ಅಥವಾ ನೀರು ಸರಬರಾಜು ಮಾಡುವ ಪೈಪ್‌ಲೈನ್ ಇಲ್ಲ, ವಿದ್ಯುತ್ ಸಮಸ್ಯೆ ಇದೆ ಎಂಬುದು ಕಾರಣವಲ್ಲ. ಬದಲಾಗಿ ಇದನ್ನು ಸರಿಯಾಗಿ ನಿರ್ವಹಿಸಿ ಜನರಿಗೆ ಸಮರ್ಪಕವಾಗಿ ಕುಡಿಯಲು ನೀರು ನೀಡಲು ಪಂಚಾಯಿತಿ ಮಾಡುವ ಅಸಡ್ಡೆ. ಈ ಭಾಗದ ರಸ್ತೆಗಳೂ ಹದಗೆಟ್ಟಿದೆ. ತೆರಿಗೆ ಸಂಗ್ರಹಿಸಲು ಮರೆಯದ ಗ್ರಾಪಂ, ಕೆರ್ನಡ್ಕದಲ್ಲಿ 2 ವರ್ಷಗಳ ಹಿಂದೆ ಒಡೆದು ಹೋದ ಒಂದು ಸಣ್ಣ ಮೋರಿಯನ್ನೂ ಈ ತನಕ ಸರಿಪಡಿಸುವ ಗೋಜಿಗೆ ಹೋಗಿಲ್ಲ!

ಹಲವು ಬಾರಿ ಪಿಡಿಒ ಗಮನಕ್ಕೆ ಈ ವಿಷಯ ತರಲಾಗಿತ್ತು. ಪ್ರತಿ ಸಲದಂತೆ ಇದೀಗ ಕೊನೆ ಬಾರಿ ಈ ಪ್ರದೇಶದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿ 20 ದಿನಗಳೇ ಕಳೆದಿದೆ! ಅಂದೇ ಈ ವಿಚಾರ ಪಂಚಾಯಿತಿ ಗಮನಕ್ಕೆ ತಂದರೂ ಈ ತನಕ ಆ ಸಣ್ಣದೊಂದು ಪೈಪ್ ಸರಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪಂಚಾಯಿತಿ ಮುಂದಾಗದ್ದು ವಿಪರ್ಯಾಸ.

Edited By : Nirmala Aralikatti
Kshetra Samachara

Kshetra Samachara

08/11/2021 11:46 am

Cinque Terre

2.73 K

Cinque Terre

0

ಸಂಬಂಧಿತ ಸುದ್ದಿ