ಪುತ್ತೂರು: ಹಿಂದು ಸಮಾಜದ ಶಕ್ತಿಯನ್ನು ವೃದ್ಧಿಸಲು ನಮ್ಮ ಮನಸ್ಸು ಮತ್ತು ಹೃದಯ ಬೆಳಕಾಗಬೇಕು. ಅದಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ 'ದೀಪದ ಬೆಳಕು...' ಎಲ್ಲರ ಮನೆ- ಮನೆಯಲ್ಲಿ ಬೆಳಗಲಿ. ಮನೆ ದೇವಸ್ಥಾನ ಆಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ವಿಭಾಗದ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ದೀಪದ ಬೆಳಕನ್ನು ಉರ್ಲಾಂಡಿ ನಾಯರಡ್ಕ ಮನೆ- ಮನೆಗಳಿಗೆ ಪ್ರದಾನ ಮಾಡಿದ ಬಳಿಕ ನಾಯರಡ್ಕ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯಲ್ಲಿ ಗೋಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೇದ ಸಮಾಜದ ಶಕ್ತಿ ಕುಂದಿಸುತ್ತದೆ. ಈ ಶಕ್ತಿಯನ್ನು ಕುಂದಿಸಲು ಹೊರಗಿನಿಂದ ಅನ್ಯಮತೀಯರು ಕಾಯುತ್ತಿದ್ದಾರೆ. ಮೋಸ, ವಂಚನೆ ತಿಳಿಯದ ಉಪೇಕ್ಷಿತ ಬಂಧುಗಳ ದಾರಿಯನ್ನು ತಪ್ಪಿಸುವ ಕೆಲಸ ಮಾಡುವವರು ಹಲವರಿದ್ದಾರೆ. ಇಂತಹ ಸಂದರ್ಭ ಹಿಂದೂ ಧರ್ಮಕ್ಕೆ ಅನ್ಯಾಯ ಆಗಬಾರದು ಎಂದಾದರೆ ನಮ್ಮಲ್ಲಿ ಸಹಕಾರ ಮಾಡುವ ಗುಣ ಬೆಳೆಯಬೇಕು ಎಂದ ಅವರು, ನಮ್ಮ ಹಿಂದು ಸಮಾಜ ಸಾವಿರಾರು ವರ್ಷಗಳಿಂದ ಬದುಕಿ ಬಂದ ಸಮಾಜ. ಈ ಸಮಾಜವನ್ನು ಎಲ್ಲಿಯೂ ಒಡೆಯದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಚಿಂತನೆಯಡಿ ಸೇವೆ ಮಾಡುತ್ತಿದೆ. ಇಲ್ಲಿ ನಾವು ಜಾತಿ ನೋಡಿಲ್ಲ, ಎಲ್ಲರೂ ಒಂದೇ ಎಂಬ ಭಾವನೆಯಿಂದ ನೋಡಿದೆ. ಇವತ್ತು ಮೇಲ್ದಾತಿ ಎಂದು ತಿಳಿದು ಕೊಂಡಿರುವವರಿಗೆ ಬಹಳ ದೊಡ್ಡ ಜವಾಬ್ದಾರಿ ಇದೆ. ನಮ್ಮ ಸಮಾಜದಲ್ಲಿ ಯಾರಿಗಾದರೂ ತೊಂದರೆ ಆದಾಗ ನಮ್ಮ ಪ್ರೀತಿ ಅವರಲ್ಲಿಗೆ ಹೋಗಬೇಕೆಂದರು.
Kshetra Samachara
04/11/2021 09:42 pm