ಸುರತ್ಕಲ್: ಸುರತ್ಕಲ್ ಪಾಲಿಕೆ ಕಚೇರಿಗೆ ಬರುವ ನಾಗರಿಕರಿಗೆ ಆನುಕೂಲವಾಗುವಂತೆ ಹೆದ್ದಾರಿ 66ರ ಬಳಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ಕುರಿತಂತೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮೆಲ್ಸೇತುವೆ ಕೆಳಭಾಗದಲ್ಲಿರುವ ಫುಟ್‌ಪಾತ್ ಸಮೀಪದಲ್ಲಿ ಲಘು ವಾಹನಗಳಿಗೆ ಒಡಾಡಲು ಅನುಕೂಲ ಕಲ್ಪಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲು ಹೆದ್ದಾರಿ ಎಂಜಿನಿಯರ್‌ಗಳಿಗೆ ಶಾಸಕರು ಸೂಚಿಸಿದರು. ಸುರತ್ಕಲ್ ಜಂಕ್ಷನ್ ಅಭಿವೃದ್ಧಿ ಪಡಿಸುವ ಬಗ್ಗೆಯೂ ಸೂಕ್ತ ಯೋಜನೆ ರೂಪಿಸಲು ನಿರ್ಧರಿಸಲಾಯಿತು.
ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ಹೆದ್ದಾರಿ ಇಲಾಖೆಯ ಅನಿರುದ್ಧ್, ಟ್ರಾಫಿಕ್ ಸಿಐ ಶರೀಫ್, ಪಾಲಿಕೆ ಆರೋಗ್ಯ ಅಧಿಕಾರಿ ಸುಶಾಂತ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/11/2021 09:50 pm