ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರಗ ಕಾಲೊನಿಯಲ್ಲಿ ಪುತ್ರನ ಹುಟ್ಟುಹಬ್ಬ ಆಚರಿಸಿದ ಶಾಸಕ ರಘುಪತಿ ಭಟ್

ಉಡುಪಿ: ಉಡುಪಿಯ ಶಾಸಕ ಕೆ. ರಘುಪತಿ ಭಟ್ ತನ್ನ ಪುತ್ರ ರೆಯಾಂಶು ಆರ್. ಭಟ್ ನ 8 ನೇ ವರ್ಷದ ಹುಟ್ಟುಹಬ್ಬವನ್ನು ಕೊರಗ ಕಾಲೊನಿಯಲ್ಲಿ ಆಚರಿಸಿದರು.

ಶನಿವಾರ ರಾತ್ರಿ ಇಂದ್ರಾಳಿಯ ಮಂಜುಶ್ರೀ ನಗರದ ಕೊರಗರ ಕಾಲೊನಿಯಲ್ಲಿ ಶಾಸಕರು ಪತ್ನಿ ಶಿಲ್ಪಾ ಅವರ ಸಹಿತ ಮಗನ ಹುಟ್ಟುಹಬ್ಬ ಆಚರಿಸಿ ಕೊರಗ ಸಮುದಾಯದವರೊಂದಿಗೆ ಭೋಜನ ಸವಿದರು.

ಈ ಸಂದರ್ಭ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸ್ಥಳೀಯ ನಗರಸಭೆ ಸದಸ್ಯರಾದ ಅಶೋಕ್ ನಾಯ್ಕ್, ಬೂತ್ ಅಧ್ಯಕ್ಷ ರವೀಂದ್ರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

31/10/2021 12:46 pm

Cinque Terre

16.36 K

Cinque Terre

0

ಸಂಬಂಧಿತ ಸುದ್ದಿ