ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಈ ಬಾರಿ ಜನೌಷಧಿ ಕೇಂದ್ರಗಳಲ್ಲಿ 800 ಕೋಟಿ ರೂ. ವ್ಯವಹಾರದ ಗುರಿ: ಸಚಿವ ಭಗವಂತ ಖೂಬಾ

ಮಂಗಳೂರು: ಕಳೆದ ಬಾರಿ ಜನೌಷಧಿ ಕೇಂದ್ರಗಳು 665 ಕೋಟಿ ರೂ. ವಹಿವಾಟು ನಡೆಸಿದೆ. ಈ ಬಾರಿ 800 ಕೋಟಿ ರೂ. ವ್ಯವಹಾರದ ಗುರಿ ಹೊಂದಿದ್ದು, ದೇಶಾದ್ಯಂತ ಇನ್ನೂ ಹೆಚ್ಚಿನ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಕೊಡಿಯಾಲಬೈಲ್ ನಲ್ಲಿರುವ ರಮಣ ಪೈ ಸಭಾಂಗಣದಲ್ಲಿ ಜನೌಷಧಿ ಮಿತ್ರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜನೌಷಧಿ ಕೇಂದ್ರಗಳು ಎಲ್ಲಿ ಕಾರ್ಯಾಚರಿಸುತ್ತಿವೆ ಎಂಬುದನ್ನು ಆ್ಯಪ್ ಮೂಲಕ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಲಿದ್ದು, ಅಲ್ಲಿ ಯಾವ ಔಷಧಿಗಳು ಲಭ್ಯವಿದೆ ಎನ್ನುವುದನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ.

2007ರಲ್ಲಿ ಅಂದಿನ ಕೇಂದ್ರ ಸರಕಾರ ಜನೌಷಧಿ ಕೇಂದ್ರವನ್ನು ಆರಂಭಿಸಿತ್ತು. ಆದರೆ 2007ರಿಂದ 2014ರವರೆಗೆ ಇಡೀ ದೇಶದಲ್ಲಿ ಕೇವಲ 90 ಜನೌಷಧಿ ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಆದರೆ 2014ರ ಮೋದಿ ಸರಕಾರ ಬಂದ ಬಳಿಕ ದೇಶದ ಜನತೆಗೆ ಜನೌಷಧಿ ಕೇಂದ್ರದ ಲಾಭ ಮುಟ್ಟಿಸುವ ನಿಟ್ಟಿನಲ್ಲಿ ಕೇವಲ 7 ವರ್ಷಗಳಲ್ಲಿ 8,400 ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ‌. ಇದೀಗ ಈ ಜನೌಷಧಿ ಕೇಂದ್ರಗಳಲ್ಲಿ 1,481 ಔಷಧಿಗಳು ಲಭ್ಯವಿದೆ. ಅಲ್ಲದೆ ಸಾಮಾನ್ಯವಾಗಿ ಬ್ರ್ಯಾಂಡೆಡ್ ಔಷಧಿ ಮೆಡಿಕಲ್ ಗಳಲ್ಲಿ ಸಿಗುವ ದರಕ್ಕಿಂತ ಸಿಗುವ 70 ರಿಂದ 90 ಶೇ. ಕಡಿಮೆ ದರದಲ್ಲಿ ದೊರಕುತ್ತದೆ ಎಂದು ಭಗವಂತ ಖೂಬಾ ಹೇಳಿದರು.

Edited By : Manjunath H D
Kshetra Samachara

Kshetra Samachara

29/10/2021 05:52 pm

Cinque Terre

16.58 K

Cinque Terre

0

ಸಂಬಂಧಿತ ಸುದ್ದಿ