ಮಂಗಳೂರು: ಬಂಟ್ವಾಳ ತಾಲೂಕಿನ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಮತ್ತು ಅಜ್ವಾರ ದೈವಗಳ ಭಂಡಾರಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ನೂತನ ಆಡಳಿತ ಸಮಿತಿಯು ಗೊಂದಲ ಸೃಷ್ಟಿಸುತ್ತಿದೆ ಎಂದು ಬಾಳ್ತಿಲ ಬೀಡುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಂಪ್ರದಾಯದಂತೆ ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವಾದಿಗಳಿಗೆ ದೈವದ ಭಂಡಾರವನ್ನು ಕೊಂಡೊಯ್ಯುವ ಪರಿಪಾಠವಿದೆ. ಅದೇ ರೀತಿ ಈ ಬಾರಿಯೂ ಕೊಂಡೊಯ್ಯಲಾಗಿರುವ ಭಂಡಾರವನ್ನು ಮರಳಿ ಹಿಂದಿರುಗಿಸಲಾಗಿಲ್ಲ. ಈ ಬಗ್ಗೆ ಹೈಕೋರ್ಟ್ ಕೂಡಾ ದೈವದ ಭಂಡಾರವನ್ನು ಮರಳಿ ವಾಪಾಸ್ ಬಾಳ್ತಿಲ ಬೀಡುವಿಗೆ ಕಳುಹಿಸಿಕೊಡಬೇಕು ಎಂದು ಆದೇಶಿಸಿದ್ದರೂ ವಾಪಸ್ ಮಾಡದೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ.
ದೇವರ ಭಂಡಾರವು ನೂರಾರು ವರ್ಷಗಳಿಂದ ಬಾಳ್ತಿಲ ಬೀಡಿನಲ್ಲಿಯೇ ಇದ್ದು, ಇದಕ್ಕೆ ಮೌಖಿಕ ಹಾಗೂ ಲಿಖಿತ ಆಧಾರಗಳೂ ಇದೆ. ಆದರೆ ಶ್ರೀಪತಿ ತಂತ್ರಿ, ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ನೂತನ ಆಡಳಿತ ಮಂಡಳಿಯ ಕುತಂತ್ರದಿಂದ ಈ ರೀತಿಯ ಗೊಂದಲ ಉಂಟಾಗಿದೆ. ಇದೀಗ ಬಾಳ್ತಿಲ ಬೀಡಿನಲ್ಲಿ ನಿತ್ಯ ಪೂಜೆಗೊಳಗಾಗುವ ದೈವಗಳನ್ನು ಮರಳಿ ಹಿಂದಿರುಗಿಸದೆ ದರ್ಪದಿಂದ ವರ್ತಿಸುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್ ತಡೆಯಾಜ್ಞೆಯ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರಿಗೆ ಕಳುಹಿಸಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪ್ರಕರಣಕ್ಕೆ ನ್ಯಾಯ ಒದಗಿಸಿಕೊಡಬೇಕು.
Kshetra Samachara
23/10/2021 03:01 pm