ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: "ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಪ್ರಮುಖ ಆರೋಪಿ ರಕ್ಷಣೆಗೆ ಹುನ್ನಾರ"

ಪುತ್ತೂರು: ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭವತಿಯನ್ನಾಗಿ ಮಾಡಿದ ಪ್ರಮುಖ ಆರೋಪಿಯನ್ನು ಪೊಲೀಸರು ತಕ್ಷಣವೇ ಬಂಧಿಸಬೇಕೆಂದು ಮುಗೇರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ್ ಒತ್ತಾಯಿಸಿದ್ದಾರೆ‌.

ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ತಾಲೂಕಿನ ಬಡಗನ್ನೂರಿನ ಈ ಬಾಲಕಿಯನ್ನು ತೋಟದಲ್ಲಿ ಕೂಲಿಯಾಳಾಗಿ ದುಡಿಸಿ ಬಳಿಕ ಆಕೆ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಸ್ಥಳೀಯ ನಿವಾಸಿ ನಾರಾಯಣ ರೈ (70) ವಿರುದ್ಧ ಬಾಲಕಿ ದೂರು ನೀಡಿದ್ದರೂ, ಪೊಲೀಸರು ಬಾಲಕಿಯ ಹೇಳಿಕೆಯನ್ನೇ ತಿರುಚಿ ಬರೆದಿದ್ದಾರೆ‌.

ಅಲ್ಲದೆ, ನಿರಪರಾಧಿಯಾಗಿರುವ ಬಾಲಕಿಯ ಅಣ್ಣನನ್ನೇ ಆರೋಪಿಯನ್ನಾಗಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ರಕ್ಷಿಸುವ ಪ್ರಯತ್ನ ಸ್ಥಳೀಯ ಪೊಲೀಸ್ ಹಾಗೂ ಜನಪ್ರತಿನಿಧಿಗಳಿಂದ ನಡೆದಿದ್ದು, ಆರೋಪಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಆರೋಪಿ ಹಾಗೂ ಸಂತ್ರಸ್ತ ಬಾಲಕಿಯ ಡಿಎನ್ಎ ಪರೀಕ್ಷೆ ಮಾಡುವ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

21/10/2021 03:53 pm

Cinque Terre

11.44 K

Cinque Terre

4

ಸಂಬಂಧಿತ ಸುದ್ದಿ