ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಂಪಾಡಿ ಕರ್ಕೇರ ಮೂಲಸ್ಥಾನದ ಶ್ರೀ ಜಾರಂದಾಯ ದೈವಸ್ಥಾನ ಮತ್ತು ನಾಗನ ಬ್ರಹ್ಮಪೀಠಕ್ಕೆ ದುಷ್ಕರ್ಮಿಗಳು ಹಾನಿ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಒಂದು ನಾಗನ ಮೂರ್ತಿಯನ್ನು ಭಗ್ನ ಮಾಡಿ, ನಂದಿಯ ಕಲ್ಲಿನ ವಿಗ್ರಹವನ್ನೂ ಒಡೆದು ಹಾಕಲಾಗಿದೆ. ಕಪಾಟು ಒಡೆದು ಹಾಕಿದ್ದರೂ ಅಲ್ಲಿದ್ದ ಹಣ ಹಾಗೂ ಹುಂಡಿಯ ಎದುರಿನಲ್ಲಿದ್ದ ಹಣ ಹಾಗೆಯೇ ಬಿಟ್ಟು ಹೋಗಿದ್ದಾರೆ.
ಸ್ಥಳಕ್ಕೆ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಹಿರಿಯ ಪೊಲೀಸ್ ಆಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಬಗ್ಗೆ ಪಣಂಬೂರು ಎಸಿಪಿ ಮಹೇಶ್ ಕುಮಾರ್ ಅವರೊಂದಿಗೆ ಶಾಸಕರು ಮಾತನಾಡಿ, ಅಪರಾಧಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. "ಹಿಂದೂಗಳ ಭಾವನೆಗಳನ್ನು ಕೆರಳಿಸುವ ಕೃತ್ಯ ಯಾರೂ ಮಾಡಬಾರದು. ತಾಳ್ಮೆಗೂ ಮಿತಿಯಿದೆ. ಒಳ್ಳೆಯ ಮಾತಿನಲ್ಲಿ ಅರ್ಥ ಮಾಡಿಕೊಳ್ಳದೆ ಹೋದಲ್ಲಿ ದಂಡ ಪ್ರಯೋಗ ಮಾಡಿಯಾದರೂ ಬುದ್ಧಿಹೀನರಿಗೆ ಬುದ್ಧಿ ಕಲಿಸಬೇಕಾಗುತ್ತದೆ" ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ.
Kshetra Samachara
17/10/2021 09:52 pm