ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೊಲೆಗಡುಕರಿಗೆ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಿಂದ ಪರೋಕ್ಷ ಬೆಂಬಲ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಆರೋಪ!

ಉಡುಪಿ: ಕೊಲೆಗಡುಕರಿಗೆ ಪರೋಕ್ಷವಾಗಿ ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಸುರೇಶ್ ನಾಯಕ್ ಬೆಂಬಲ ಕೊಡುತ್ತಿದ್ದಾರೆ. ಯಡಮೊಗೆ ಬಿಜೆಪಿಯ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಅಪರಾಧಿಗಳನ್ನು ರಕ್ಷಿಸುವಲ್ಲಿ ಸುರೇಶ್ ನಾಯಕ್‌ರ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಮುಂದೊಂದು ದಿನ ಕಾಂಗ್ರೆಸ್ ನ ಸಮಸ್ತ ಕಾರ್ಯಕರ್ತರೇ ಅವರ ಮನೆಗೆ ಮುತ್ತಿಗೆ ಹಾಕುವ ಸಂದರ್ಭ ಬಂದೀತು. ಅದರ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು ಎಂದು ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಹೇಳಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು , ವಿವಿಧ ಇಲಾಖಾಧಿಕಾರಿಗಳು ಮತ್ತು ಜನ ಸಾಮಾನ್ಯರ ಬಾಯಲ್ಲೂ ನಿಮ್ಮ ಶಾಸಕರ ಬಗ್ಗೆ ಮಾತು ಹರಿದಾಡುತ್ತಿದೆ.ಬಿಜೆಪಿ ಜಿಲ್ಲಾಧ್ಯಕ್ಷರೇ, ನಿಮಗೆ ಸಮಯ ವಿದ್ದರೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಗುಟ್ಟಾಗಿ ಸಂಪರ್ಕಿಸಿ. ಶಾಸಕರ ಭ್ರಷ್ಟಾಚಾರದ ಬಗ್ಗೆ ಅಧಿಕಾರಿಗಳ ಹೇಳಿಕೆಯನ್ನು ಸೊರಕೆಯವರು ಹೇಳಿರಬಹುದು, ಇದರ ಸತ್ಯಾಸತ್ಯತೆಯನ್ನು ಜಿಲ್ಲಾಧ್ಯಕ್ಷರು ಪರೀಕ್ಷಿಸಬೇಕು ಎಂದು ಹೇಳಿದರು.

ನಮ್ಮ ನಾಯಕರಾದ ವಿನಯಕುಮಾರ್ ಸೊರಕೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದರೆ ಕಾಂಗ್ರೆಸ್ ಪಕ್ಷ ಸುಮ್ಮನೇ ಕುಳಿತುಕೊಳ್ಳುವುದಿಲ್ಲ.ಬಿಜೆಪಿ ಪಕ್ಷದ ಜನಪ್ರಿಯತೆ ಕಡಿಮೆಯಾಗುತ್ತಿದೆ.ಇದರಿಂದ ಹತಾಶಗೊಂಡು ನಮ್ಮ ನಾಯಕರ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದರೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ತಕ್ಷ ಕುಯಿಲಾಡಿ ಸುರೇಶ್ ನಾಯಕ್ ಗೆ ಅಶೋಕ್ ಕೊಡವೂರು ಎಚ್ಚರಿಕೆ ನೀಡಿದರು.

Edited By : Shivu K
Kshetra Samachara

Kshetra Samachara

02/10/2021 05:51 pm

Cinque Terre

14.26 K

Cinque Terre

2

ಸಂಬಂಧಿತ ಸುದ್ದಿ