ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸದಾನಂದ ಗೌಡರ ವೀಡಿಯೋ ಬರುವಾಗ ಬಜರಂಗದಳದವರು ಎಲ್ಲಿದ್ದರು?: ಲಾವಣ್ಯ ಬಲ್ಲಾಳ್ ಪ್ರಶ್ನೆ

ಮಂಗಳೂರು: ಕೆಲಸ ಇಲ್ಲದ ಬಜರಂಗದಳದವರು ಸದಾನಂದ ಗೌಡರ ವೀಡಿಯೋ ಬರುವಾಗ ಎಲ್ಲಿದ್ದರು. ಯಾಕೆ ಗಲಾಟೆ ಮಾಡಿಲ್ಲ. ಕೋವಿಡ್ ಬಂದು ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬಜರಂಗದಳದವರು ಯಾರಾದರೂ ಸಹಾಯ ಮಾಡಿದರೇ ಎಂದು ಎಐಸಿಸಿ ವಕ್ತಾರೆ ಲಾವಣ್ಯ ಬಲ್ಲಾಳ್ ಪ್ರಶ್ನಿಸಿದ್ದಾರೆ.

ನಗರದ ಸುರತ್ಕಲ್ ನಲ್ಲಿ‌ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿದ್ದ ವಾಹನದ ಮೇಲೆ ದಾಳಿಯನ್ನು ಪ್ರಶ್ನಿಸಿ ಕಿಡಿಕಾರಿದ ಅವರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಾಲಿಬಾನ್ ಸರಕಾರ ಇರೋದೆ ಅಥವಾ ಬಿಜೆಪಿ ಸರಕಾರ ಇರೋದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಲಿ ಎಂದು ಹೇಳಿದರು.

ಬೇರೆಯವರ ಮಕ್ಕಳಿಗೆ ಬುದ್ಧಿ ಕಲಿಸಲು ಬಜರಂಗದಳದವರು ಯಾರು. ಪ್ರೀತಿಯಿಂದ ಸಾಕಿ-ಸಲಹಿ ಓದಿಸುತ್ತಿರುವ ವಿದ್ಯಾರ್ಥಿಗಳ ಹೆತ್ತವರಿಗೆ ಬುದ್ಧಿ ಕಲಿಸಲು ಗೊತ್ತಿಲ್ಲವೇ, ಬೇರೆಯವರು ಬಂದು ಬುದ್ಧಿ ಕಲಿಸಬೇಕೆ. ಹೆತ್ತವರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ಹೆತ್ತವರೂ ಅಷ್ಟೊಂದು ಕಷ್ಟಪಟ್ಟು ಮಕ್ಕಳನ್ನು ಬೆಳೆಸುವಾಗ ನಿಮ್ಮ ಮಕ್ಕಳು ಯಾವುದೋ ಪುಡಿ ರೌಡಿಗಳ ಕೈಯಲ್ಲಿ ಬೈಸಿಕೊಂಡು ಶಿಕ್ಷಣ ಪಡೆಯಬೇಕೆ‌ ಎಂದು ಹೆತ್ತವರಿಗೆ ಪ್ರಶ್ನಿಸಿದ ಲಾವಣ್ಯ ಬಲ್ಲಾಳ್, ಬಜರಂಗದಳದವರಿಗೆ ಈ ರೀತಿ ಸಾರ್ವಜನಿಕರನ್ನು ತಡೆದು ಪ್ರಶ್ನಿಸುವ ಹಕ್ಕು ಎಲ್ಲಿಂದ ಬಂತು ಎಂದು ಪೊಲೀಸರು ಉತ್ತರಿಸಬೇಕು. ಅದೇ ರೀತಿ ಹೀಗೆ ಸಾರ್ವಜನಿಕರನ್ನು ತಡೆದವರ, ಹಲ್ಲೆಗೈದವರ ಮೇಲೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ ತಿಳಿಸಲಿ ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

29/09/2021 09:35 am

Cinque Terre

17.36 K

Cinque Terre

19

ಸಂಬಂಧಿತ ಸುದ್ದಿ