ಬಜಪೆ:ಎಸ್ ಇಝಡ್ ಗೆ ಒಳಪಟ್ಟ ಕೆಲ ಕಂಪೆನಿಗಳ ಕಲುಷಿತ ನೀರು ಕೃಷಿ ಗದ್ದೆಗಳಿಗೆ ಹಾಗೂ ತೋಡುಗಳಿಗೆ ಸೇರುತಿದ್ದು,ತೋಡುಗಳಲ್ಲಿನ ಮೀನುಗಳು ಸತ್ತು ಬಿದ್ದು ಗಬ್ಬುನಾಥ ಬೀರುತ್ತಿದೆ ಎಂದು ಪೆರ್ಮುದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೆರ್ಮುದೆಯ ಪಂಚಾಯತ್ ಸಭಾಭವನದಲ್ಲಿ ನಡೆದ 2021-22 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಲುಷಿತ ನೀರು ಈಗಾಗಲೇ ಪರಿಸರವನ್ನು ಸೇರುತ್ತಿದ್ದು,ವಿವಿಧ ರೋಗಗಳಿಗೆ ಕಾರಣವಾಗಬಹುದು.ರೋಗ ಬಂದರೆ ಇದಕ್ಕೆ ಹೊಣೆ ಯಾರು?ಅಲ್ಲದೆ ಈ ಬಗ್ಗೆ ಉತ್ತರ ನೀಡಬೇಕಾಗಿದ್ದ ಕಂಪೆನಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳೂ ಕೂಡ ಗ್ರಾಮಸಭೆಗೆ ಗೈರಾಗಿದ್ದಾರೆ.ಮುಂದಕ್ಕೆ ಗ್ರಾ.ಪಂ ವಿಶೇಷ ಗ್ರಾಮ ಸಭೆಯನ್ನು ಕರೆದು ಸಂಬಂಧಪಟ್ಟ ಕಂಪೆನಿಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಉತ್ತರಿಸಿದ ಪೆರ್ಮುದೆ ಗ್ರಾ.ಪಂ ಅಧ್ಯಕ್ಷ ಪ್ರಸಾದ್ ಅಂಚನ್ ಅವರು ಆ.4 ಕ್ಕೆ ವಿಶೇಷ ಗ್ರಾಮ ಸಭೆಯನ್ನು ಕಂಪೆನಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದರು.ಅಲ್ಲದೆ ಪೆರ್ಮುದೆ ಗ್ರಾ.ಪಂ ವ್ಯಾಪ್ತಿಗೆ ಸಂಬಂಧಪಟ್ಟ ಕೆಲ ಕಂಪೆನಿಗಳಿಂದ ತೆರಿಗೆಯನ್ನು ಕೂಡ ತೆಗೆದುಕೊಳ್ಳದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿಗಳನ್ನು ನೀಡಿದರು.ನೋಡಲ್ ಅಧಿಕಾರಿಯಾಗಿ ತಾ.ಪಂ ನ ಕಾರ್ಯನಿರ್ವಹಣಾಧಿಕಾರಿ ಜಿ.ನಾಗರಾಜ್,ಪೆರ್ಮುದೆ ಗ್ರಾ.ಪಂ ನ ಅಧ್ಯಕ್ಷ ಪ್ರಸಾದ್ ಅಂಚನ್,ಪಿಡಿಓ ಶೈಲಜ,ಉಪಾಧ್ಯಕ್ಷೆ ಲೀನಾ ಡಿ ಸೋಜ,ಕಾರ್ಯದರ್ಶಿ ನಾಗೇಶ್ ಸುವರ್ಣ,ವಿವಿಧ ಇಲಾಖೆಗಳ ಅಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
28/09/2021 06:13 pm