ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಾರತ್ ಬಂದ್ ಎಫೆಕ್ಟ್ ಇಲ್ಲ : ಕೃಷ್ಣನಗರಿ ನಾರ್ಮಲ್

ಉಡುಪಿ: ಇಂದು ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ.ಆದರೆ ಕೃಷ್ಣನಗರಿ ಉಡುಪಿಯಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭಗೊಂಡಿದ್ದು ಜನಜೀವನ ಮಾಮೂಲಿನಂತಿದೆ.

ಸರಕಾರಿ, ಖಾಸಗಿ ಬಸ್‌ಗಳು, ಆಟೋ ರಿಕ್ಷಾಗಳು,ಕ್ಯಾಬ್ ಗಳು ರಸ್ತೆಗಿಳಿದಿವೆ.ಒಟ್ಟಾರೆ ಉಡುಪಿ ಜಿಲ್ಲೆಯಾದ್ಯಂತ ಎಂದಿನಂತೆ ಜನಜೀವನ ಸಾಮಾನ್ಯವಾಗಿದೆ.ಆದರೆ ಮಧ್ಯಾಹ್ನ ಹೊತ್ತಿಗೆ ,ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಲಿವೆ.

Edited By : Shivu K
Kshetra Samachara

Kshetra Samachara

27/09/2021 11:36 am

Cinque Terre

13.39 K

Cinque Terre

0

ಸಂಬಂಧಿತ ಸುದ್ದಿ