ಮಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಒಂದು ರಾಜಕೀಯ ಪಕ್ಷವಾಗಿದ್ದು 2015ರಲ್ಲಿ ಚುನಾವಣಾ ಆಯೋಗದಲ್ಲಿ ನೋಂದಾವಣಿಯಾಗಿದೆ. ಅಲ್ಲದೇ 2018ರ ಚುನಾವಣೆಯಲ್ಲಿ ಅಧಿಕೃತವಾಗಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಲ್ಲೂ ಮೊನ್ನೆ ಮಂಗಳೂರಲ್ಲಿ ನಡೆದಂತಹ ಪತ್ರಿಕಾಗೋಷ್ಠಿಯನ್ನು ನಡೆಸಿದ ಶ್ರೀ ಧರ್ಮೇಂದ್ರರವರು ರಾಜ್ಯದ ಪ್ರಧಾನ ಕಾರ್ಯದರ್ಶಿ ಮಾತ್ರವಲ್ಲದೆ, ಅಂದಿನ ದಿನದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಅಧಿಕೃತ ಅಭ್ಯರ್ಥಿಯಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ. ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಅಧಿಕೃತವಾಗಿ ಪಕ್ಷವನ್ನು ಪ್ರತಿನಿಧಿಸಿದ ಶ್ರೀ ಧರ್ಮೇಂದ್ರರನ್ನ ಹಾಗೂ ಹಿಂದೂ ಮಹಾಸಭಾವನ್ನು ನಕಲಿ ಎಂದು ಕರೆದ ವ್ಯಕ್ತಿಯು, ಈ ಹಿಂದೆ ಅದೇ ಪಕ್ಷದಲ್ಲಿ ಜವಾಬ್ದಾರಿಯನ್ನು ಹೊಂದಿದ್ದ ವ್ಯಕ್ತಿ.
ಅನಂತರ 2019ರಲ್ಲಿ ಉಚ್ಚಾಟನೆಗೊಂಡು ಅನಧಿಕೃತವಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಎಂದು ಸ್ವಯಂಘೋಷಿತವಾಗಿ ಅದರ ರಾಜ್ಯಾಧ್ಯಕ್ಷನೆಂದುಕೊಂಡು ಆಮೇಲೆ ಸ್ವತಃ ತದನಂತರ ನಕಲಿ ಡಾಕ್ಟರೇಟನ್ನು ಪಡೆದುಕೊಂಡು ಜನರಲ್ಲಿ ಗೊಂದಲವನ್ನು ಹಾಗೂ ಸಾರ್ವಜನಿಕರ ದುಡ್ಡನ್ನು ಪಡೆಯುವುದಕ್ಕೋಸ್ಕರ ಅಖಿಲ ಭಾರತ ಹಿಂದೂ ಮಹಾಸಭಾದ ಹೆಸರು ಅದಕ್ಕೆ ಸಂಬಂಧಪಟ್ಟ ಮೊಹರು, ಸ್ಟಾಂಪ್, ಲೆಟರ್ಹೆಡ್, ಚಿಹ್ನೆ ಮುಂತಾದವುಗಳನ್ನು ದುರ್ಬಳಕೆ ಮಾಡಿರುವುದರಿಂದ ಈ ವಿಚಾರದಲ್ಲಿ ಪೊಲೀಸ್ ಆಯುಕ್ತರನ್ನು ಮುಖದ ಭೇಟಿಯಾಗಿ ಆಗಸ್ಟ್ 23 ರಂದು ಪಕ್ಷವು ದೂರನ್ನು ಕೊಟ್ಟಿತ್ತು. ಹಾಗೂ ಈವರೆಗೆ ಈ ಪ್ರಕರಣದಲ್ಲಿ ಯಾವುದೇ ತನಿಖೆ ನಡೆದಿರುವುದಿಲ್ಲ. ಆದರೆ ರೋಹಿತ್ ಸುವರ್ಣ ಎನ್ನುವ ಅದೇ ವ್ಯಕ್ತಿ ದ್ವೇಷದ ರಾಜಕಾರಣದಿಂದ ಮೊನ್ನೆ ನಡೆದ ದೇವಸ್ಥಾನ ಧ್ವಂಸ ಪ್ರಕರಣದ ವಿಚಾರವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಧರ್ಮೇಂದ್ರರು ನೀಡಿದಂತಹ ಹೇಳಿಕೆಯ ವಿರುದ್ಧವಾಗಿ ಭಾರತೀಯ ಜನತಾ ಪಕ್ಷದ ರಾಜ್ಯ ಸರಕಾರದ ಪರವಾಗಿ ದೂರನ್ನು ಕೊಟ್ಟಿದ್ದು, ಆ ದೂರನ್ನು ತಕ್ಷಣ ಪಡೆದುಕೊಂಡು ಎಫ್ ಐ ಅರ್ ನ್ನು ದಾಖಲಿಸಿ ಪಕ್ಷದ ಹೆಚ್ಚಿನ ನಾಯಕರ ವಿರುದ್ಧ ಪ್ರಕರಣವನ್ನು ಕೂಡ ದಾಖಲು ಮಾಡಿ ಬಂಧಿಸಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದರು.
ಇದು ಪ್ರಜಾಪ್ರಭುತ್ವದ ಹಾಗೂ ಸಂವಿಧಾನಕ್ಕೆ ಬಗೆದ ದ್ರೋಹವಾಗಿದೆ ಎಂದು ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಶ್ರೀ ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
25/09/2021 04:31 pm