ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಾಜೀ ಸಚಿವ "ದಿ.ಡಾ. ದಾಮೋದರ್ ಮುಲ್ಕಿ ಬಡವರ ಬಂಧು ಹಾಗೂ ಸಮಾಜಕ್ಕೆ ಅವರ ಕೊಡುಗೆ ಅನನ್ಯ": ಉಮಾನಾಥ್ ಕೋಟ್ಯಾನ್

ಮುಲ್ಕಿ: ಕರ್ನಾಟಕದ ಮಾಜೀ ಸಚಿವ ದಿ. ಡಾ. ದಾಮೋದರ್ ಮುಲ್ಕಿ ರವರು ರಾಜ್ಯ ಕಂಡ ಅಪರೂಪದ ನಿಷ್ಠಾವಂತ ಶುದ್ಧಹಸ್ತ ರಾಜಕಾರಣಿಯಾಗಿದ್ದು ಸಮಾಜಕ್ಕೆ ಅವರ ಕೊಡುಗೆ ಅನನ್ಯ, ಅವರ ನೆನಪು ಸದಾ ಉಳಿಯಲು ಮುಲ್ಕಿ ನ. ಪಂ. ನಾಮಫಲಕವನ್ನು ಅಳವಡಿಸಿದ್ದು ಶ್ರದ್ಧೆ ಹಾಗೂ ಗೌರವ ಸಲ್ಲಿಸಿದೆ ಎಂದು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಮುಲ್ಕಿ ನಗರ ಪಂಚಾಯತ್ ವತಿಯಿಂದ ಕಾರ್ನಾಡು ಬೈಪಾಸ್ ಹಾಗೂ ಕಾರ್ನಾಡು ಜಂಕ್ಷನ್ ಬಳಿ ಮಾಜಿ ಸಚಿವ ಡಾ. ದಾಮೋದರ್ ಮುಲ್ಕಿ ರಸ್ತೆಯ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ದಿ.ಡಾ. ದಾಮೋದರ್ ಮುಲ್ಕಿ ರವರು ಒಕ್ಕಲು ಮಸೂದೆಯ ದಿನಗಳಲ್ಲಿ ಬಡವರ ಪರವಾಗಿ ಹೋರಾಡಿದ ಮಹಾನ್ ನಾಯಕರಲ್ಲಿ ಒಬ್ಬರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ವಹಿಸಿದ್ದರು. ಡಾ. ಹರಿಶ್ಚಂದ್ರ ಸಾಲ್ಯಾನ್ ದಾಮೋದರ್ ಮುಲ್ಕಿ ಸಾಧನೆಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ನ.ಪಂ. ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಪುತ್ತುಬಾವ, ಮಂಜುನಾಥ ಕಂಬಾರ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮುಖ್ಯಾಧಿಕಾರಿ ಚಂದ್ರಪೂಜಾರಿ, ದಾಮೋದರ್ ಮುಲ್ಕಿ ಯವರ ಪತ್ನಿ ಕಮಲಾಕ್ಷಿ, ರಂಗಕರ್ಮಿ ಚಂದ್ರಶೇಖರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಉದ್ಯಮಿ ರಾಜಕುಮಾರ್ ಬೆಹರಿನ್ ಸ್ವಾಗತಿಸಿದರು. ಡಾ. ವಂದನಾ ಧನ್ಯವಾದ ಅರ್ಪಿಸಿದರು.ವಿಜಯಕುಮಾರ್ ಕುಬೆವೂರು ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

25/09/2021 04:25 pm

Cinque Terre

5.82 K

Cinque Terre

0

ಸಂಬಂಧಿತ ಸುದ್ದಿ