ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮೆಸ್ಕಾಂ ಕಚೇರಿಯ ಎದುರು ರಾತ್ರೋ ರಾತ್ರಿ ಧರಣಿ

ಮೂಡುಬಿದಿರೆ: ಪುರಸಭಾ ವ್ಯಾಪ್ತಿ ಯ ಕಲ್ಲಬೆಟ್ಟು ಕೋಂಕೆ ಎಂಬಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಕೆಟ್ಟು ಹೋಗಿ ನಾಲ್ಕೈದು ದಿನಕಳೆದರೂ ದುರಸ್ತಿ ಆಗದೆ ಜನರಿಗೆ ನೀರು ಪೂರೈಕೆ ಆಗದೆ ಸಮಸ್ಯೆ ತಲೆದೋರಿತ್ತು. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ಅಲ್ಲಿನ ನಿವಾಸಿಗಳು ಜ್ಯೋತಿನಗರದಲ್ಲಿರುವ ಮೆಸ್ಕಾಮ್ ಕಚೇರಿ ಎದುರು ಕೊಡಪಾನಗಳನ್ನಿರಿಸಿ, ಗೇಟಿಗೂ ಕೆಲವು ಕೊಡಪಾನಗಳನ್ನು ಬಿಗಿದು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಆಲ್ವಿನ್ ಮಿನೇಜಸ್ ಅವರ ನೇತೃತ್ವದಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಅಧಿಕಾರಿಗಳು ಕೊನೆಗೂ ಪ್ರತಿಭಟನೆಗೆ ಮಣಿದು ರಾತ್ರಿಯೇ ಕ್ರೇನ್ ನಲ್ಲಿ ಟ್ರಾನ್ಸ್ ಫಾರ್ಮರ್ ಹಾಕಿಕೊಂಡು ಕಲ್ಲಬೆಟ್ಟು ಗ್ರಾಮದತ್ತ ತೆರಳಿದರು.

ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್ , ಕೊರಗಪ್ಪ, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ಇಕ್ಬಾಲ್ ಕರೀಂ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಶೇಖರ್ ಮತ್ತಿತರರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ತ್ವರಿತವಾಗಿ ರಾತ್ರೆಯೇ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಸಲು ಅಧಿಕಾರಿಗಳು ಮುಂದಾದ ಬಳಿಕ ಪ್ರತಿಭಟನೆ ಹಿಂತೆಗೆಯಲಾಯಿತು.

Edited By : Nagesh Gaonkar
Kshetra Samachara

Kshetra Samachara

22/09/2021 04:30 pm

Cinque Terre

17.06 K

Cinque Terre

0

ಸಂಬಂಧಿತ ಸುದ್ದಿ