ಮಂಗಳೂರು: ಇಹಲೋಕ ತ್ಯಜಿಸಿರುವ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಇಂದು ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಸೇರಿದಂತೆ ಹಲವಾರು ಮುಖಂಡರು ಅಂತಿಮ ದರ್ಶನ ಪಡೆದರು. ಈ ಸಂದರ್ಭ ಜನಾರ್ದನ ಪೂಜಾರಿಯವರು ತನ್ನ ಆತ್ಮೀಯ ಮಿತ್ರನ ನೆನೆದು ಗದ್ಗದಿತರಾಗಿ, ಗಳಗಳನೆ ಅತ್ತರು.
ನಂತರ ಮಾತನಾಡಿದ ಅವರು, ಆಸ್ಕರ್ ಫರ್ನಾಂಡಿಸ್ ಅಗಲಿದ್ದಾರೆ ಎಂಬ ಸಂಗತಿ ಕೇಳಿ ಬಹಳ ಬೇಸರವಾಯಿತು. ಅವರನ್ನು ಉಳಿಸಿಕೊಳ್ಳಲಾಗದಿರೋದು ನಮ್ಮ ದೌರ್ಭಾಗ್ಯ. ನನ್ನನ್ನು ಎಲ್ಲಿ ಕಂಡರೂ ಸರ್.. ಸರ್.. ಎಂದು ನನ್ನ ಹಿಂದೆಯೇ ಬರುತ್ತಿದ್ದರು. ಇನ್ನು ಆಸ್ಕರ್ ರನ್ನು ನೋಡಲಾಗುವುದಿಲ್ಲ. ನನ್ನ ಅರ್ಧ ಜೀವ ಹೋದಂತೆಯೇ ಎಂದು ಗಳಗಳನೇ ಅತ್ತು ಬಿಟ್ಟರು.
Kshetra Samachara
15/09/2021 02:25 pm