ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಕೀಯ ಕರ್ಮಭೂಮಿ ಉಡುಪಿಗೆ ನಾಳೆ ಆಸ್ಕರ್ ಮೃತದೇಹ

ಉಡುಪಿ: ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ವಿಧಿವಶರಾಗಿದ್ದಾರೆ. ಆಸ್ಕರ್ ಫೆರ್ನಾಂಡಿಸ್ ಅವರ ಮೃತದೇಹವನ್ನು ಉಡುಪಿ ನಗರದ ಮದರ್ ಆಫ್ ಸಾರೋಸ್ ಚರ್ಚಿಗೆ ಮಂಗಳವಾರ ಮುಂಜಾನೆ ಒಂಬತ್ತು ಗಂಟೆ ಸುಮಾರಿಗೆ ಕರೆತರಲಾಗುತ್ತದೆ.

ಚರ್ಚ್ ನಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಧರ್ಮಗುರುಗಳು ನೆರವೇರಿಸಲಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪ್ರಾರ್ಥನೆ ಪೂಜೆ ನೆರವೇರಲಿದೆ. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಚರ್ಚ್ ಫಾದರ್ ಚಾರ್ಲ್ಸ್ ಮಿನೇಜಸ್ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಡುತ್ತಾರೆ.

ಜಿಲ್ಲೆಯ ಕೆಲ ಗಣ್ಯರು ಇದೇ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ಅಂತಿಮ ದರ್ಶನ ಮಾಡಲಿದ್ದಾರೆ. 11 ಗಂಟೆ ಸುಮಾರಿಗೆ ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಸ್ಕರ್ ಫೆರ್ನಾಂಡಿಸ್ ಮೃತದೇಹವನ್ನು ರವಾನೆ ಮಾಡಲಾಗುತ್ತದೆ. ಜಿಲ್ಲೆಯ ಹಿರಿಯ ನಾಯಕರು, ಕಾರ್ಯಕರ್ತರು ಆಸ್ಕರ್ ಫರ್ನಾಂಡಿಸ್ ಹಿತೈಷಿಗಳು ಆಪ್ತರು ಬಂದು ದರ್ಶನ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯಾಹ್ನ 1:30 ರವರೆಗೆ ಅಂತಿಮ ದರ್ಶನ ವ್ಯವಸ್ಥೆ ಇದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮಾಹಿತಿ ನೀಡಿದೆ.

Edited By : Vijay Kumar
Kshetra Samachara

Kshetra Samachara

13/09/2021 09:07 pm

Cinque Terre

15.89 K

Cinque Terre

2

ಸಂಬಂಧಿತ ಸುದ್ದಿ