ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ: ಬೂತ್ ಅಧ್ಯಕ್ಷರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ಕಟಪಾಡಿ: ಕಟಪಾಡಿ ಮೂಡುಬೆಟ್ಟು ವಿನ ಹಿರಿಯ ಬಿಜೆಪಿ ಕಾರ್ಯಕರ್ತ ಕರುಣಾಕರ ಪೂಜಾರಿಯವರು ಕಟಪಾಡಿಯ ಬೂತ್ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮನೆಗೆ ಆಗಮಿಸಿ ಅವರ ಮನೆಯಲ್ಲಿ ನಾಮಫಲಕ ಅಳವಡಿಕೆ ಮಾಡಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾರ್ಯಕರ್ತರನ್ನು ಬೂತ್ ಮಟ್ಟದಲ್ಲಿ ಗುರುತಿಸುವುದರಲ್ಲಿ ಬಿಜೆಪಿ ಪಕ್ಷ ಬೆಳೆಯುತ್ತಿದೆ. ಕಟಪಾಡಿಯ ಹಿರಿಯ ಕಾರ್ಯಕರ್ತ ಕರುಣಾಕರ್ ಪೂಜಾರಿಯವರ ಮನೆಯಲ್ಲಿ ಅವರ ನಾಮಫಲಕ ಅಳವಡಿಸಲು ಅತ್ಯಂತ ಸಂತೋಷ ಆಗುತ್ತಿದೆ.ಮುಂದಿನ ೧೦ ವರ್ಷಗಳ ಕಾಲ ಬಿಜೆಪಿ ಆಡಳಿತಕ್ಕೆ ಬರಲಿದ್ದು, ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಾಪು ಮಹಿಳಾ ಮೋರ್ಚಾದ ವತಿಯಿಂದ ಕಟೀಲು ಅವರಿಗೆ ಆರತಿ ಬೆಳಗಿಸಿ ಹಣೆಗೆ ತಿಲಕ ಹಚ್ಚಲಾಯಿತು.ನಂತರ ಅವರನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಇದೇ ಸಂದರ್ಭ ಅವರು ಗೋಪೂಜೆಯನ್ನು ನೆರವೇರಿಸಿದರು.

Edited By : Manjunath H D
Kshetra Samachara

Kshetra Samachara

13/09/2021 12:48 pm

Cinque Terre

33.1 K

Cinque Terre

5

ಸಂಬಂಧಿತ ಸುದ್ದಿ