ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ತ್ರಿಪುರದಲ್ಲಿ ರಾಜಕೀಯ ಹಿಂಸಾಚಾರ ನಿಲ್ಲಬೇಕು; ಸಿಪಿಎಂ

ಕುಂದಾಪುರ: ತ್ರಿಪುರದಲ್ಲಿ ಆಳುವ ಬಿಜೆಪಿಯು ತನ್ನ ಅಸ್ತಿತ್ವಕ್ಕಾಗಿ ಸಿಪಿಎಂ ಪಕ್ಷದ ವಿರುದ್ಧ ಹಿಂಸಾಚಾರವನ್ನು ನಡೆಸುತ್ತಿದೆ. ಸಿಪಿಎಂ ರಾಜ್ಯ ಸಮಿತಿ ಕಛೇರಿ ಸೇರಿದಂತೆ ವಿವಿಧ ಕಛೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ದೊಂಬಿ,ಹಲ್ಲೆ ನಡೆಸುತ್ತಿರುವುದನ್ನು ಖಂಡಿಸಿ ಇಂದು ದೇಶವ್ಯಾಪಿ ಪ್ರತಿಭಟನೆಯ ಅಂಗವಾಗಿ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಸಿಪಿಎಂ ಪ್ರತಿಭಟನೆ ನಡೆಸಿತು.

ತ್ರಿಪುರ ರಾಜ್ಯದ ಬಿಜೆಪಿ ಸರಕಾರವು ಬೆಲೆ ಏರಿಕೆ ವಿರುದ್ಧ, ಕೇಂದ್ರದ ನೀತಿಗಳ ವಿರುದ್ಧ ಹೋರಾಟ ಮಾಡುವವರನ್ನು ಬಾಯಿ ಮುಚ್ಚಿಸಲು ತನ್ನ ಕಾರ್ಯಕರ್ತರ ಮೂಲಕ ಹಿಂಸಾಚಾರ ಮಾಡಿಸುತ್ತಿದೆ. ಶಾಂತಿಯುತವಾಗಿ ರಾಜಕೀಯ ಚಟುವಟಿಕೆಗಳನ್ನು ಸಂಘಟಿಸುವ ಪ್ರತಿಪಕ್ಷಗಳ ಸಾಂವಿಧಾನಿಕ ಹಕ್ಕುಗಳನ್ನೇ ಬಿಜೆಪಿ ಸರಕಾರ ತುಳಿದು ಹಾಕುತ್ತಿದೆ.ಕೇಂದ್ರ ಸರಕಾರ ಇಂತಹ ದೊಂಬಿಗಳನ್ನು ನಡೆಸುವವರನ್ನು ರಕ್ಷಿಸುತ್ತಿದೆ ಎಂದು ಕುಂದಾಪುರ ವಲಯ ಕಾರ್ಯದರ್ಶಿ ಎಚ್ ನರಸಿಂಹ ಆರೋಪಿಸಿದರು.

ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ ಮಾತನಾಡಿ;

ಬಿಜೆಪಿ ಕಾರ್ಯಕರ್ತರು ಮಾಧ್ಯಮದವರನ್ನು ಬಿಡುತ್ತಿಲ್ಲ.ಇಲೆಕ್ಟ್ರಾನಿಕ್ ಮಾಧ್ಯಮಗಳ ಕಛೇರಿಯ ಹಾಗು ಪಿಎನ್ -24ನ್ಯೂಸ್ ವಾಹಿನಿ,ಪ್ರತಿಬಾದಿ ಕಲಮ್ ಎಂಬ ವಾರ್ತಾಪತ್ರಿಕೆಯ ಮೇಲೆ ಹಲ್ಲೆ ನಡೆಸಲಾಗಿದೆ.ಸಿಪಿಎಂ ಪಕ್ಷದ ದಿನಪತ್ರಿಕೆ ದೇಶೇರ್ ಕಥಾ ಕಛೇರಿಯನ್ನು ಹಾಳುಗೆಡವಲಾಗಿದೆ.

ತ್ರಿಪುರ ಜನತೆಯ ಗೌರವ ಪಾತ್ರ ನೇತಾರ ದಶರಥ್ ದೇಬ್ ಅವರ ಪ್ರತಿಮೆ ಒಡೆದು ಹಾಕಲಾಗಿದೆ ಇಂತಹ ಸರಣಿ ದೊಂಬಿಗಳು ನಡೆಯುತ್ತಿದ್ದರೂ ಪ್ರಧಾನಮಂತ್ರಿಗಳು ಮಾತನಾಡುತ್ತಿಲ್ಲ.ದೇಶದ ನಾಗರಿಕರ ಮೇಲೆ ಗೌರವವಿದ್ದರೆ ಕೂಡಲೇ ಮಧ್ಯ ಪ್ರವೇಶಿಸಿ ಹಿಂಸಾಚಾರ ನಿಲ್ಲಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರವಿ ವಿ ಎಂ ಸ್ವಾಗತಿಸಿದರು.ಪಕ್ಷದ ಮುಖಂಡರಾದ ದಾಸಭಂಡಾರಿ,ಮಹಾಬಲ ವಡೇರ ಹೋಬಳಿ,ಬಲ್ಕೀಸ್ ಮೊದಲಾದವರಿದ್ದರು.

Edited By : Nagesh Gaonkar
Kshetra Samachara

Kshetra Samachara

11/09/2021 06:31 pm

Cinque Terre

18.06 K

Cinque Terre

1

ಸಂಬಂಧಿತ ಸುದ್ದಿ