ಹೆಬ್ರಿ : ಸಾಮಾನ್ಯ ಜ್ವರದಂತಹ ಕೊವೀಡ್ ವೈರಸನ್ನು ಭಾರೀ ದೊಡ್ಡ ಕಾಯಿಲೆ ತರ ಬಿಂಬಿಸಿ ಜನರನ್ನು ಬಲಿಪಡೆಯುವ ಜೊತೆಗೆ ಜನರು ತತ್ತರಿಸಿ ಹೋಗುವ ಹಾಗೇ ಮಾಡಿದ್ದರೆ. ಜನರನ್ನು ಕೇಳುವವರೇ ಇಲ್ಲ. ಸಾಮಾನ್ಯ ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯ. ಬಡವರನ್ನು ಕೇಳುವವರೇ ಇಲ್ಲ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ದೂರಿದರು.
ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆ ದಿನದಿನ ಏರಿಕೆಯಾಗುತ್ತಿದೆ. ಅಚ್ಚೇದಿನ್ ಅಂದರೆ ಇದೆನಾ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.
ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಈಗ ಅವೆಲ್ಲವನ್ನು ಈಗ ಬಿಜೆಪಿಯ ವರು ಮಾರಾಟ ಮಾಡುತ್ತ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಕೊರೋನ ಸಂಕಷ್ಟದ ನಡುವೆ ಆರ್ಥಿಕ ಕುಸಿತವಾಗಿದೆ. ಲಾಕ್ ಡೌನ್ ನಿಂದಾಗಿ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸಮಸ್ಯೆಯನ್ನು ಸರಿ ಮಾಡುವ ಬದಕು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಘಲಕ್ ದರ್ಭಾರ್ ನಡೆಸುತ್ತಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಸರ್ಕಾರದ ಮಂತ್ರಿಗಳು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಲಾಕ್ ಡೌನ್, ವಾರಾಂತ್ಯದ ಕರ್ಪ್ಯೂ ಹೇರಿಕೆ ಮಾಡುತ್ತಿದ್ದಾರೆ.ಉಡುಪಿ ಜಿಲ್ಲೆಗೆ ಕರ್ಪ್ಯೂ ಅಗತ್ಯ ಇಲ್ಲ ಎಂದರು. ಉಡುಪಿಯ ನೂತನ ಜಿಲ್ಲಾಧಿಕಾರಿಯವರು ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷವಾದ ಗಮನ ನೀಡಲಿ.ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳಿಗೆ ಶಾಲೆಗೆ ಹೋಗಲು ಸರಿಯಾಗಿ ಬಸ್ ಸೌಕರ್ಯ ವಿಲ್ಲ. ಈ ಬಗ್ಗೆ ಡಿಸಿ ಗಮನಿಸಿ ಕ್ರಮ ಕೈಗೊಳ್ಳಲಿ ಎಂದು ಮಂಜುನಾಥ್ ಪೂಜಾರಿ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಆಚಾರ್ಯ, ಕಾರ್ಯದರ್ಶಿ ಅಶ್ವಿನಿ ಮುದ್ರಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಪ್ರಮುಖರಾದ ಬಲ್ಲೆಮನೆ ಸುಧಾಕರ ಶೆಟ್ಟಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/09/2021 06:28 pm