ಬಜಪೆ : ಮಹಿಳೆ ಮತ್ತು ವಿದ್ಯಾರ್ಥಿನಿಯರ ಭದ್ರತೆ ಸಹಿತ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ನ್ಯಾಶನಲ್ ವಿಮೆನ್ಸ್ ಫ್ರಂಟ್ ವತಿಯಿಂದ ಬಜಪೆ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಜರಗಿತು.
ಅತ್ಯಾಚಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮಗಳನ್ನು ಜರುಗಿಸಬೇಕು.ಸಂತ್ರಸ್ತೆಯ ಪರವಾಗಿ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಬೇಕು.ಅಲ್ಲದೆ ಸಂತ್ರಸ್ತೆಗೆ ಝಡ್ ಪ್ಲಸ್ ಮಾದರಿಯ ಸಂಪೂರ್ಣ ಭದ್ರತೆ ಒದಗಿಸಬೇಕು. ಪ್ರತಿ ಆರಕ್ಷಕ ಠಾಣೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಟಾಸ್ಕ್ ಫೋರ್ಸ್ ನೇಮಿಸಬೇಕು.ಪ್ರತಿ ಕಾಲೇಜಿನಲ್ಲಿ ಕಲಿಯುವ ಹೆಣ್ಣು ಮಕ್ಕಳಿಗೆ ಕಲಿಕೆಯೊಂದಿಗೆ ಸೆಕ್ಸ್ ಡಿಫೆನ್ಸ್ ಅನ್ನು ಕಡ್ಡಾಯವಾಗಿ ಹಾಗೂ ಉಚಿತವಾಗಿ ಕಲಿಸುವಂತಹ ಯೋಜನೆ ಯನ್ನು ಜಾರಿಗೊಳಿಸಬೇಕು. ಅಶ್ಲೀಲತೆ ಪಸರಿಸದಂತೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ಸೆನ್ಸಾರ್ ಅಳವಡಿಸಬೇಕು.ಬ್ಲೂ ಫಿಲಂ,ಮಾದಕ ದ್ರವ್ಯ ವಸ್ತುಗಳ ಮಾರಾಟ ,ಸೇವನೆಯನ್ನು ಬುಡ ಸಹಿತ ಕಿತ್ತೆಸೆಯಬೇಕು ಹಾಗೂ ಇನ್ನು ಹಲವು ಬೇಡಿಕೆಗಳನ್ನು ಮುಂದಿಟ್ಟು ನ್ಯಾಶನಲ್ ವಿಮೆನ್ಸ್ ಫ್ರಂಟ್ ನ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ನ್ಯಾಶನಲ್ ವಿಮೆನ್ಸ್ ಫ್ರಂಟ್, ಕರ್ನಾಟಕ ರಾಜ್ಯಕಾರ್ಯದರ್ಶಿ ಆಯಿಷಾ,ಜುಲೈಕಾ, ಆತಿಕಾ,ಮುಯಿನಾ, ಅಫೀಝಾ ಭಾಗವಹಿಸಿದ್ದರು.ನಂತರ ಬಜಪೆ ಪೊಲೀಸ್ ಠಾಣೆಯ ಎಸ್‌ಐ ಪೂವಪ್ಪ ಅವರಿಗೆ ಮನವಿ ನೀಡಿದರು.
Kshetra Samachara
01/09/2021 11:51 am