ಉಡುಪಿ: ಶ್ರೀರಾಮಸೇನೆಯ ರಾಜ್ಯ ನಾಯಕನ ಕಾರ್ಯವೈಖರಿ ಬಗ್ಗೆ ಬೇಸತ್ತು ಸಂಘಟನೆಗೆ ಜಯರಾಂ ಅಂಬೆಕಲ್ಲು ರಾಜಿನಾಮೆ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶ್ರೀರಾಮಸೇನೆಯ ಸ್ಥಾಪಕ ನಗರ ಉಪಾಧ್ಯಕ್ಷಾಗಿದ್ದ ಜಯರಾಂ ನಂತರ ವಿವಿಧ ಜವಾಬ್ದಾರಿ ನಿರ್ವಹಿಸಿ, ಜಿಲ್ಲಾಧ್ಯಕ್ಷರಾಗಿ ಎಲ್ಲ ಜನರನ್ನು ಸಮಾನವಾಗಿ ಕೊಂಡೊಯ್ದು ಸಂಘಟನೆಯನ್ನು ರಾಜ್ಯ ಮಟ್ಟದಲ್ಲೇ ಗುರುತಿಸಲು ಕಾರಣೀಭೂತರಾದವರು.
ಈಗ ರಾಜ್ಯ ಪ್ರಧಾನ ಕಾರ್ಯದರ್ಶಿ ಯವರ ಬೇಜವ್ದಾರಿತನದಿಂದ ಶ್ರೀ ರಾಮಸೇನೆಗೆ ರಾಜಿನಾಮೆಯನ್ನು ನೀಡಿದ್ದಾರೆ ಎಂಬುದು ವಿಪರ್ಯಾಸ. ಹಿಂದುತ್ವ ಸಿದ್ದಾಂತದಲ್ಲಿ ರಾಜಿ ಮಾಡಿಕೊಳ್ಳದ ಜಯರಾಂ ಅಂಬೆಕಲ್ಲು ರವರು ತಮ್ಮ ಮುಂದಿನ ನಡೆಯನ್ನು ಕಾರ್ಯಕರ್ತರೊಂದಿಗೆ ಚರ್ಚಿಸಿ ಶೀಘ್ರದಲ್ಲೆ ಬಹಿರಂಗ ಪಡಿಸಲಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
28/08/2021 02:23 pm